ಶಿರಸಿ: ಅನ್ನಭಾಗ್ಯ ಯೋಜನೆ ಅಕ್ಕಿ ಅಕ್ರಮ ಮಾರಾಟಕ್ಕೆ ಯತ್ನ, ಮಂಗಳೂರು ಹೊಟೇಲ್ ಕ್ರಾಸ್ ಬಳಿ ಮೂವರ ಬಂಧನ
ಶಿರಸಿ : ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಸಂಗ್ರಹಿಸಿ ಹೆಚ್ಚಿನ ಬೆಲೆ ಮಾರಾಟ ಮಾಡಲು ಸಾಗಾಟ ಮಾಡುತ್ತಿದ್ದಾಗ ಶಿರಸಿ ನಗರ ಠಾಣೆ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿ, ಅಕ್ಕಿಯನ್ನು ವಶಪಡಿಸಿಕೊಂಡಿದ್ದಾರೆ. ಮೊದಲನೇ ಆರೋಪಿಯಾದ ಶಿರಸಿಯ ನರೇಬೈಲಿನ ಮಹ್ಮದ್ ಉಬೇದ ಮಹ್ಮದ್ ಸಲೀಂ ಜವಳಿ ಪಡಿತರ ಚೀಟಿದಾರರಿಂದ ಕಡಿಮೆ ಬೆಲೆಗೆ ಖರೀದಿಸಿದ ಅನ್ನಬಾಗ್ಯ ಯೋಜನೆಯ ಒಟ್ಟು 40 ಕ್ವಿಂಟಲ್ ಅಕ್ಕಿಯನ್ನು ತನ್ನ ಹಿಟ್ಟಿನ ಗಿರಣಿಯಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದು, ಅದನ್ನು ಎರಡನೇ ಆರೋಪಿತ ಇಸಳೂರಿನ ಸುನೀಲ್ ಮಹಾದೇವಪ್ಪ ನಡಗಿ ಖರೀದಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಶಿರಸಿಯಿಂದ ಹುಬ್ಬಳ್ಳಿ ಕಡೆಗೆ ಟಾಟಾ ಕಂಪನಿಯ ವಾಹನದಲ್ಲಿ ಸಾಗಿಸುತ್ತಿದ್ದರು.