ಶಿರಸಿ: ಯೋಗ ಮಂದಿರದಲ್ಲಿ ಎರಡು ದಿನಗಳ ಡೇರೆ ಮೇಳಕ್ಕೆ ಚಾಲನೆ : ಡೇರೆ ಗಿಡಗಳ ಪ್ರದರ್ಶನ ಮತ್ತು ಮಾರಾಟ
ಶಿರಸಿ : ವೈಜ್ಞಾನಿಕವಾಗಿ ಪುಷ್ಪ ಕೃಷಿ ಕೈಗೊಂಡರೆ ನಿರಂತರ ಆದಾಯ ಮಹಿಳೆಯರದ್ದಾಗುತ್ತದೆ ಎಂದು ತೋಟಗಾರಿಕಾ ಇಲಾಖೆ ಡಿಡಿ ಬಿ.ಪಿ.ಸತೀಶ ಹೇಳಿದರು. ನಗರದ ಯೋಗ ಮಂದಿರದಲ್ಲಿ ಆಯೋಜಿಸಿರುವ ಎರಡು ದಿನಗಳ ಡೇರೆ ಮೇಳಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿದ ಅವರು, ಪುಷ್ಪ ಕೃಷಿಯಲ್ಲಿ ಅವಕಾಶ ಸಾಕಷ್ಟಿದೆ. ಪುಷ್ಪ ಕೃಷಿಯ ಹವ್ಯಾಸಕ್ಕೆ ವಾಣಿಜ್ಯದ ಸ್ಪರ್ಷ ನೀಡಲು ಮಹಿಳೆಯರು ಮುಂದಾಗಬೇಕು. ಆ ಮೂಲಕ ಮಹಿಳೆಯರು ಉದ್ಯಮಶೀಲರಾಗಬೇಕು ಎಂದರು.