ಶಿರಸಿ: ಅರಣ್ಯ ನೌಕರರ ಭವನದ ಸಮೀಪ ಗಾಂಜಾ ಮಾರಾಟ ಮಾಡುತ್ತಿದ್ದ 6 ಆರೋಪಿಗಳ ಬಂಧನ
ಶಿರಸಿ : ಗಾಂಜಾ ಸಾಗಾಟ ಮತ್ತು ಮಾರಾಟ ಮಾಡುತ್ತಿದ್ದ 6 ಆರೋಪಿಗಳನ್ನು ಶಿರಸಿ ಹೊಸ ಮಾರುಕಟ್ಟೆ ಪೊಲೀಸರು ಬಂಧಿಸಿದ್ದಾರೆ. ಯಲ್ಲಾಪುರ ರಸ್ತೆಯ ಅರಣ್ಯ ನೌಕರರ ಭವನದ ಶನಿವಾರ ತಡರಾತ್ರಿ ಆರು ಜನ ವ್ಯಕ್ತಿಗಳು ಗಾಂಜಾ ಸಾಗಾಟ ಮಾಡಿಕೊಂಡು ಬಂದು ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿಯ ಮೇಲೆ ದಾಳಿ ಮಾಡಿ ಆರೋಪಿತರಾದ ಶಿರಸಿಯ ಮುಸ್ಲಿಂ ಗಲ್ಲಿಯ ಇಜಾಜ ಮಕ್ಬೂಲ್ ಶೆಖ, ಅಯ್ಯಪ್ಪ ನಗರದ ಮುಸ್ತಾಕ ಅಬ್ದುಲರೆಹಮಾನ ಖಾನ, ಸೊಂದಾ ಕ್ರಾಸ್ ಅಕ್ಬರಬಾಷಾ ಮೆಹಬೂಬ ಅಲಿ ದೊಡ್ಮನಿ, ರಾಜೀವ ನಗರದ ಆನಂದ ಹನುಮಂತ ಬೋವಿವಡ್ಡರ, ಬಚಗಾಂವಿನ ಕೃಷ್ಣ ಗಣೇಶ ಆಚಾರಿ ಬಂಧಿಸಲಾಗಿದೆ.