ಹಾರೋಹಳ್ಳಿ: ಜಮೀನು ವಿವಾದದಲ್ಲಿ ತೋಟ ಧ್ವಂಸ, ಮನೆ ನೆಲಸಮ
ಹಾರೋಹಳ್ಳಿ ತಾಲೂಕಿನ ಚಿಕ್ಕ ದೇವರಹಳ್ಳಿ ಗ್ರಾಮದಲ್ಲಿ ಜಮೀನು ವಿವಾದದ ಹಿನ್ನೆಲೆ ಮುನಿರಾಜು ಅವರ ತೋಟವನ್ನು 40 ಮಂದಿ ದುಷ್ಕರ್ಮಿಗಳು ಧ್ವಂಸಗೊಳಿಸಿದ್ದಾರೆ. ಜೆಸಿಬಿ ಬಳಸಿ ಮನೆಯನ್ನು ನೆಲಸಮಗೊಳಿಸಿ, ಬೆಳೆ ನಾಶಪಡಿಸಿ, ಕುಟುಂಬದ ಸದಸ್ಯರ ಮೇಲೆ ಹಲ್ಲೆ ನಡೆಸಲಾಗಿದೆ. ಹಾರೋಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.