ರಾಮನಗರ: ಕರ್ಕಶ ಸೈಲೆನ್ಸರ್ ಬೈಕ್ಗಳಿಗೆ ಬಿಸಿ ಮುಟ್ಟಿಸಿದ ಪೊಲೀಸರು!
ರಾಮನಗರ ಟೌನ್ನಲ್ಲಿ ಕರ್ಕಶ ಸೈಲೆನ್ಸರ್ ಅಳವಡಿಸಿದ್ದ ಬೈಕ್ ಸವಾರನಿಗೆ ಪೊಲೀಸರು ದಂಡ ವಿಧಿಸಿದ್ದಾರೆ. ಬೈಕ್ನಿಂದ ಸೈಲೆನ್ಸರನ್ನು ತೆರವುಗೊಳಿಸಿ, ಮತ್ತೆ ನಿಯಮ ಉಲ್ಲಂಘನೆ ಮಾಡದಂತೆ ಎಚ್ಚರಿಕೆ ನೀಡಲಾಗಿದೆ. ಶಬ್ದ ಮಾಲಿನ್ಯಕ್ಕೆ ಕಾರಣವಾಗುವ ಸವಾರರ ವಿರುದ್ಧ ಪೊಲೀಸರು ಕಠಿಣ ಕ್ರಮ ಮುಂದುವರಿಸಿದ್ದಾರೆ.