ಮಡಿಕೇರಿ: ಕರ್ನಾಟಕದಲ್ಲಿ ಅಕ್ಟೋಬರ್ 26ರ ವರೆಗೆ ಮಳೆ ಮುನ್ಸೂಚನೆ: ಚಂಡಮಾರುತದ ಎಫೆಕ್ಟ್?
ಅಕ್ಟೋಬರ್ 26ರ ವರೆಗೆ ರಾಜ್ಯದ ಕರಾವಳಿ, ಮಲೆನಾಡು ಹಾಗೂ ಒಳನಾಡಿನ ಜಿಲ್ಲೆಗಳಲ್ಲಿ ಮಳೆ ಮುಂದುವರಿಯಲಿದೆ. ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತವು ಅಕ್ಟೋಬರ್ 25, 26ರ ವೇಳೆಗೆ ಚಂಡಮಾರುತವಾಗಿ ಬದಲಾಗುವ ಲಕ್ಷಣಗಳಿದ್ದು, ಅಕ್ಟೋಬರ್ 29-30ರ ಸುಮಾರಿಗೆ ಆಂಧ್ರ ಕರಾವಳಿ ಪ್ರವೇಶಿಸುವ ಸಾಧ್ಯತೆ ಇದೆ.