ರಾಯಚೂರ ನಗರದ ಬಂದೆನವಾಜ ಕಾಲೋನಿ ಪ್ರದೇಶದ ನಿವಾಸಿಗಳಿಗೆ ಶವ ಸಂಸ್ಕಾರಕ್ಕೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ವಿಧಾನ ಪರಿಷತ್ ಸದಸ್ಯರು ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಎ. ವಸಂತ ಕುಮಾರ ಅವರು ಜನಾಜಾ ವ್ಯಾನ್ ವಾಹನ ಹಾಗೂ ಎರಡು ರೆಫ್ರಿಜರ್‌ಗಳನ್ನು ಹಸ್ತಾಂತರಿಸಿದರು. ಸುಮಾರು 20 ಲಕ್ಷ ರೂ. ತಾಲೂಕಿನ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನದಿಂದ ಈ ಸೌಲಭ್ಯ ಒದಗಿಸಲಾಗಿದೆ. ಬುಧವಾರ 12 ಗಂಟೆಗೆ ನಡೆದ ಕಾರ್ಯಕ್ರಮದಲ್ಲಿ ಸಮಾಜದ ಮುಖಂಡರ ಸಮ್ಮುಖದಲ್ಲಿ ವಾಹನ ಹಾಗೂ ರೆಫ್ರಿಜರ್‌ಗಳನ್ನು ಅಧಿಕೃತವಾಗಿ ಹಸ್ತಾಂತರಿಸಲಾಯಿತು.