ಚಿತ್ರದುರ್ಗ: ಭದ್ರಾ ಕಾಲುವೆಯಲ್ಲಿ ಸಿಲುಕಿದ್ದ ಸಾರಂಗವನ್ನು ರಕ್ಷಿಸಿದ ಸ್ಥಳೀಯರು
ಚಿತ್ರದುರ್ಗದ ಕ್ಯಾದಿಗ್ಗೆರೆ ಬಳಿ ಭದ್ರಾ ಕಾಲುವೆಯಲ್ಲಿ ಸಿಲುಕಿದ್ದ ಸಾರಂಗವನ್ನು ಸ್ಥಳೀಯ ನಿವಾಸಿಗಳು ರಕ್ಷಿಸಿದ್ದಾರೆ. ನೀರು ಅರಸಿ ಕಾಡಿನಿಂದ ಬಂದಿದ್ದ ಸಾರಂಗ ಕಾಲುವೆಗೆ ಇಳಿದು ಮೇಲೆ ಬರಲಾರದೆ ಒದ್ದಾಡುತ್ತಿತ್ತು. ಸ್ಥಳೀಯರ ಸಮಯಪ್ರಜ್ಞೆಯಿಂದ ಸಾರಂಗದ ಜೀವ ಉಳಿದಿದೆ.