ವಿರಾಜಪೇಟೆ: ಹುದಿಕೇರಿಯಲ್ಲಿ ನೂತನ ರಸ್ತೆ ಉದ್ಘಾಟನೆ: ಶಾಸಕ ಎ.ಎಸ್. ಪೊನ್ನಣ್ಣ ಅವರಿಂದ ಚಾಲನೆ
ಪೊನ್ನಂಪೇಟೆ ತಾಲೂಕಿನ ಹುದಿಕೇರಿಯಲ್ಲಿ ಶಾಸಕ ಎ.ಎಸ್. ಪೊನ್ನಣ್ಣ ಅವರ 4 ಲಕ್ಷ ರೂ. ಅನುದಾನದಲ್ಲಿ ಅಭಿವೃದ್ಧಿಪಡಿಸಿದ ಐಪುಮಾಡ ಐನ್ ಮನೆಗೆ ತೆರಳುವ ರಸ್ತೆಯನ್ನು ಉದ್ಘಾಟಿಸಲಾಯಿತು. ಈ ವೇಳೆ ಐಪುಮಾಡ ಕುಟುಂಬಸ್ಥರು ಶಾಸಕರನ್ನು ಸನ್ಮಾನಿಸಿದರು.