ಬೆಂಗಳೂರು ಉತ್ತರ: ಮೂಡಲಪಾಳ್ಯ ಸಮೀಪದ ಶಕ್ತಿ ಗಾರ್ಡನ್ ನಲ್ಲಿ ರಸ್ತೆ ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಿದ ಶಾಸಕರಾದ ಪ್ರಿಯ ಕೃಷ್ಣ
ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಮೂಡದಪಾಳ್ಯ ಸಮೀಪವಿರುವ ಶಕ್ತಿ ಗಾರ್ಡನ್ ನಲ್ಲಿ ನೂತನ ರಸ್ತೆ ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಶಾಸಕರಾದ ಪ್ರಿಯ ಕೃಷ್ಣ ಹಾಗೂ ಸ್ಥಳೀಯ ಮುಖಂಡರು ನೂತನ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು. ಶಕ್ತಿ ಗಾರ್ಡನ್ ನಲ್ಲಿ ಇತ್ತೀಚೆಗೆ ರಸ್ತೆಗಳು ಸಂಪೂರ್ಣವಾಗಿ ಹದಗೆಟ್ಟಿತ್ತು. ಹೀಗಾಗಿ ವಾಹನ ಸಂಚಾರಕ್ಕೂ ತೊಂದರೆ ಉಂಟಾಗುತ್ತಿತ್ತು , ಸಾರ್ವಜನಿಕರ ಅನುಕೂಲಕ್ಕಾಗಿ ಎಂದು ರಸ್ತೆಗಳ ಡಾಂಬರೀಕರಣ ಕಾಮಗಾರಿಗೆ ಶಾಸಕರ ಸಮ್ಮುಖದಲ್ಲಿ ಚಾಲನೆ ನೀಡಲಾಗಿದೆ.