ರಾಯಚೂರು: ಪತ್ರಕರ್ತರ ಮತ ಎಣಿಕೆ ವೇಳೆ ಗ್ರಾಫ್ ಪೇಪರ್ ಉಪಯೋಗ
ನವಂಬರ್ 9ರಂದು ನಡೆಯಲಿರುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಮತದಾನ ನಂತರ ಅಂದೆ ಮತ ಎಣಿಕೆ ನಡೆಯಲಿದ್ದು ಈ ವೇಳೆ ಮತ ಪಡೆದವರ ಸಂಖ್ಯೆಯನ್ನು ವಿಶೇಷವಾಗಿ ಗ್ರಾಫ್ ಪೇಪರ್ ನಲ್ಲಿ ಬರೆದುಕೊಳ್ಳಲಾಗುವುದು ಎಂದು ಚುನಾವಣಾ ಅಧಿಕಾರಿ ಮಲ್ಲಣ್ಣ ಹೇಳಿದರು. ಬುಧವಾರ 3 ಗಂಟೆಗೆ ನಡೆದ ಸಭೆಯಲ್ಲಿ ಮಾಹಿತಿ ನೀಡಿದ ಅವರು ಗ್ರಾಫ್ ಪೇಪರ್ ನಲ್ಲಿ ಬರೆಯುವುದರಿಂದ ಸಾಕಷ್ಟು ಅನುಕೂಲಗಳು ಮತ್ತು ಯಾವುದೇ ಗೊಂದಲ ಇರುವುದಿಲ್ಲ ಎಂದು ಹೇಳಿದರು.