ಚಾಮರಾಜನಗರ: ಸಂತೆಮರಹಳ್ಳಿ ಸಮೀಪ ಸೈಕಲ್-ಬೈಕ್ ಅಪಘಾತ,
ಸೈಕಲ್ ಸವಾರನಿಗೆ ತೀವ್ರ ಪೆಟ್ಟು
ಚಾಮರಾಜನಗರ ತಾಲ್ಲೂಕಿನ ಸಂತೆಮರಹಳ್ಳಿ ಸಮೀಪದ ಹಿರಿಯೂರು ಗೇಟ್ ಬಳಿ ಸೈಕಲ್ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿ, ಸೈಕಲ್ ಸವಾರನಿಗೆ ತಲೆಗೆ ಗಾಯವಾಗಿರುವ ಘಟನೆ ನಡೆದಿದೆ. KA10EE7290 ನಂಬರ್‌ನ ಬೈಕ್ ಮತ್ತು ಸೈಕಲ್ ನಡುವೆ ಈ ಅಪಘಾತ ಸಂಭವಿಸಿದ್ದು, ಬೈಕ್ ಸವಾರ ಅರುಣ್ ಎಂಬವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದರೆ ಸೈಕಲ್ ಸವಾರ ಮಹದೇವಸ್ವಾಮಿ ರವರಿಗೆ ತಲೆಗೆ ಪೆಟ್ಟಾಗಿರುವ ಕಾರಣ, ಸ್ಥಳೀಯರು ಕೂಡಲೆ ಅವರನ್ನು ಸಮೀಪದ ಆಸ್ಪತ್ರೆಗೆ ಚಿಕಿತ್ಸೆಗೆ ರವಾನಿಸಿದ್ದಾರೆ. ಘಟನೆ ಸ್ಥಳಕ್ಕೆ ಜನತೆ ಸಹಾಯ ಕಾರ್ಯದಲ್ಲಿ ತೊಡಗಿದ್ದರಿಂದ ಅಪಘಾತದ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.