ಬಳ್ಳಾರಿ: 8 ತಿಂಗಳಿನಿಂದ ಅಗೆದು ಬಿಟ್ಟ ರಸ್ತೆ, ಅಧಿಕಾರಿಗಳಿಗೆ ತರಾಟೆ ಹಾಕಿದ ಸೋಮಶೇಖರ ರೆಡ್ಡಿ
ಬಳ್ಳಾರಿಯ ಇಂದಿರಾ ನಗರದಲ್ಲಿ 8 ತಿಂಗಳಿನಿಂದ ಅಗೆದ ರಸ್ತೆ ದುರಸ್ತಿ ಕಾಣದೆ ಸ್ಥಳೀಯರು ಪರದಾಡುತ್ತಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಮಾಜಿ ಶಾಸಕ ಗಾಲಿ ಸೋಮಶೇಖರ ರೆಡ್ಡಿ, ತಕ್ಷಣವೇ ರಸ್ತೆ ದುರಸ್ತಿಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.