ವಿರಾಜಪೇಟೆ: ಗೋಣಿಕೊಪ್ಪ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ದೇವಪಂಡ ಕುಟ್ಟಪ್ಪನವರ ಸ್ಮರಣಾರ್ಥ ಶಾಂತಿ ಪೂಜೆ
ಟಿಪ್ಪು ಜಯಂತಿ ದಿನದಂದು ಮೃತಪಟ್ಟ ದೇವಪಂಡ ಕುಟ್ಟಪ್ಪನವರ ನೆನಪಿನಲ್ಲಿ ಗೋಣಿಕೊಪ್ಪ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ಶಾಂತಿ ಪೂಜೆ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾ ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.