ಮಂಗಳೂರು: 5 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಲತಾ ಮಾರಿಯಾ ಬಂಧನ
ಕಾವೂರು ಪೊಲೀಸ್ ಠಾಣೆಯ ಕಳವು ಪ್ರಕರಣವೊಂದರಲ್ಲಿ 5 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಲತಾ ಮಾರಿಯಾಳನ್ನು ಪೊಲೀಸರು ಬಂಧಿಸಿದ್ದಾರೆ. ನ್ಯಾಯಾಲಯದಿಂದ ದಸ್ತಗಿರಿ ವಾರಂಟ್ ಹೊರಡಿಸಲಾಗಿದ್ದ ಆರೋಪಿಯನ್ನು ಜ್ಯೋತಿ ನಗರದಲ್ಲಿ ಪತ್ತೆ ಹಚ್ಚಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.