ಶಿವಮೊಗ್ಗ: ಕಾಣೆಯಾಗಿದ್ದ ಯುವತಿ ಕೊಲೆ ಪ್ರಕರಣ: ನಗರದಲ್ಲಿ ಎಸ್‌ಪಿ ಮಿಥುನ್ ಕುಮಾರ್ ಪ್ರತಿಕ್ರಿಯೆ
ಶಿವಮೊಗ್ಗ ಜಿಲ್ಲೆಯ ತೀರ್ಥಳ್ಳಿ ತಾಲೂಕಿನ ಆಗುಂಬೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೂಜಾ ಎಂಬ 24 ವರ್ಷ ವಯಸ್ಸಿನ ಯುವತಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ಅದಾದ ಬಳಿಕ ಪೊಲೀಸರು ತನಿಖೆ ನಡೆಸಿದಾಗ ಕೊಲೆ ಮಾಡಿದ ಮಣಿಕಂಠ ಹಾಗೂ ಪೂಜಾ ಪರಿಚಯಸ್ತರು ಮತ್ತು ಸಂಬಂಧಿಕರೇ ಆಗಿರುತ್ತಾರೆ. ಇಬ್ಬರ ನಡುವೆ ಹಣಕಾಸಿನ ವ್ಯವಹಾರ ಕೂಡ ನಡೆದಿತ್ತು. ಇನ್ನಾ ಹಣ ಕೊಡುವುದಾಗಿ ಕರೆಸಿ ಆಕೆಯ ಕತ್ತುಹಿಸಿಕೆ ಬೆಟ್ಟದಿಂದ ಮಣಿಕಂಠ ತಳ್ಳಿ ಪೂಜಾಳನ್ನ ಕೊಲೆ ಮಾಡಿದ್ದಾನೆ. ಪೊಲೀಸರಿಗೆ ಅನುಮಾನ ಬರದಂತೆ ಪೊಲೀಸರ ಜೊತೆ ಇದ್ದು, ಕಥೆ ಕಟ್ಟಿಸಿದ್ದಾನೆ ಬಳಿಕ ಆತನ ಮೇಲೆ ಅನುಮಾನ ಗೊಂಡ ಪೊಲೀಸರು ವಿಚಾರಿಸಿದಾಗ ಮಣಿಕಂಠ ಸತ್ಯ ಬಾಯಿಬಿಟ್ಟಿದ್ದಾನೆ ಎಂದು ಭಾನುವಾರ ಎಸ್ಪಿ ಮಿಥುನ್ ಕುಮಾರ್ ಶಿವಮೊಗ್ಗದಲ್ಲಿ ಮಾಹಿತಿ ನೀಡಿದರು.