ಶಿಕಾರಿಪುರ: ಮಲೆನಾಡಿನ ರೈತರ ಬಗ್ಗೆ ಮಾತನಾಡುವ ಯೋಗ್ಯತೆ ಸಂಸದ ಬಿ.ವೈ.ರಾಘವೇಂದ್ರಗೆ ಇಲ್ಲ: ಪಟ್ಟಣದಲ್ಲಿ ಸಚಿವ ಮಧು ಬಂಗಾರಪ್ಪ
ಮಲೆನಾಡಿನ ರೈತರ ಬಗ್ಗೆ ಮಾತನಾಡುವ ಯೋಗ್ಯತೆ ಸಂಸದ ಬಿ.ವೈ.ರಾಘವೇಂದ್ರಗೆ ಇಲ್ಲ, ಅವರ ತಂದೆ ಸಿಎಂ ಆದ ಅವಧಿಯಲ್ಲಿ ಯಾವುದೇ ರೈತರಿಗೆ ಹಕ್ಕುಪತ್ರವನ್ನು ನೀಡುವ ಕೆಲಸವನ್ನು ಮಾಡಿಲ್ಲ ಎಂದು ಪಟ್ಟಣದ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಸಚಿವ ಮಧು ಬಂಗಾರಪ್ಪ ಹೇಳಿದರು. ಅನೇಕ ವರ್ಷಗಳ ಸಮಸ್ಯೆಯಾಗಿರುವ ಮಲೆನಾಡಿನ ಬಗರ್ ಕುಂ ಸಾಗುವಳಿ ರೈತರಿಗೆ ಅನ್ಯಾಯವಾಗಿದೆ, ಶರಾವತಿ ಮುಳುಗಡೆ ಸಂತ್ರಸ್ತರಿಗೆ ಈವರೆಗೂ ಭೂಮಿ ಸಿಕ್ಕಿಲ್ಲ ಎಂದರು. ನಾವು ಪ್ರಾಮಾಣಿಕವಾಗಿ ಹಕ್ಕು ಪತ್ರವನ್ನು ನೀಡುವ ಕೆಲಸವನ್ನು ಮಾಡಲಿದ್ದೇವೆ ಎಂದರು.