ಸಿ.ಎ.ಆರ್ ಪರೇಡ್ ಮೈದಾನದಲ್ಲಿ ವಾರದ ಕವಾಯತು – ಪೊಲೀಸ್ ಆಯುಕ್ತರಿಂದ ಪರಿವೀಕ್ಷಣೆ ಹಾಗೂ ಸಿಬ್ಬಂದಿ ಕುಂದುಕೊರತೆ ಆಲಿಕೆ
ನಗರ:
ಸಿ.ಎ.ಆರ್ (ನಗರ ಸಶಸ್ತ್ರ ಮೀಸಲು ಪಡೆ) ಪರೇಡ್ ಮೈದಾನದಲ್ಲಿ ಇಂದು ಆಯೋಜಿಸಲಾಗಿದ್ದ ವಾರದ ಶಿಸ್ತಿನ ಕವಾಯತಿನಲ್ಲಿ ಮಾನ್ಯ ಪೊಲೀಸ್ ಆಯುಕ್ತರಾದ ಡಾ|| ಶರಣಪ್ಪ ಎಸ್.ಡಿ., ಐಪಿಎಸ್ ರವರು ಭಾಗವಹಿಸಿ ಗೌರವ ವಂದನೆ ಸ್ವೀಕರಿಸಿದರು.
ಬಳಿಕ ಕವಾಯತ್ತಿನ ಸಮಗ್ರ ಪರಿವೀಕ್ಷಣೆ ನಡೆಸಿದ ಅವರು, ಪೊಲೀಸ್ ಪಡೆಯ ಶಿಸ್ತು ಮತ್ತು ದೈಹಿಕ ಕ್ಷಮತೆಯನ್ನು ಪರಿಶೀಲಿಸಿದರು. ಇದೇ ವೇಳೆ ಕರ್ತವ್ಯನಿರತ ಸಿಬ್ಬಂದಿಗಳೊಂದಿಗೆ ನೇರ ಸಂವಾದ ನಡೆಸಿ, ಅವರ ಕುಂದು-ಕೊರತೆಗಳು ಹಾಗೂ ಸಮಸ್ಯೆಗಳನ್ನು ಅತ್ಯಂತ ಸಹಾನುಭೂತಿಯಿಂದ ಆಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಆಯುಕ್ತರು, "ಸಾರ್ವಜನಿಕರ ರಕ್ಷಣೆ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪ್ರತಿಯೊಬ್ಬ ಸಿಬ್ಬಂದಿಯ ಪಾತ್ರವೂ ಪ್ರಮುಖವಾಗಿದೆ. ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸುತ್ತಾ, ವೃತ್ತಿಪರತೆ ಮತ್ತು ಬದ್ಧತೆಯಿಂದ ಅತ್ಯುತ್ತಮ ರೀತಿಯಲ್ಲಿ ಕರ್ತವ್ಯ ನಿರ್ವಹಿಸಬೇಕು" ಎಂದು ಸಲಹೆ ಹಾಗೂ ಮಾರ್ಗದರ್ಶನ ನೀಡಿದರು.
#KarnatakaStatePolice #KSP #IPS #PoliceParade #CARParadeGrounds #PoliceCommissioner #DisciplineInForce #PoliceAdvisory #KarnatakaNews
Yadgir, Yadgir | Aug 24, 2026