ಶ್ರೀರಂಗಪಟ್ಟಣ: ಕೆಆರ್'ಎಸ್ ಜಲಾಶಯದ ನೀರಿನ ಮಟ್ಟ 2 ಅಡಿ ಇಳಿಕೆ: ಹೊರಹರಿವು ಹೆಚ್ಚಳ
ಮಂಡ್ಯ ಜಿಲ್ಲೆಯ ಜೀವನಾಡಿ ಕೆಆರ್'ಎಸ್ ಜಲಾಶಯದ ನೀರಿನ ಮಟ್ಟ 2 ಅಡಿ ಇಳಿಕೆಯಾಗಿದೆ. ಜಲಾಶಯದ ಹೊರಹರಿವು ಹೆಚ್ಚಳ ಮಾಡಲಾಗಿದೆ. ಈ ಕುರಿತು ಭಾನುವಾರ ನಗರದಲ್ಲಿ ಕಾನೀನಿ ಮಾಹಿತಿ ನೀಡಿ, ಜಲಾಶಯದ ಗರಿಷ್ಠ ಮಟ್ಟ 124.80 ಅಡಿ ಪೈಕಿ ಸದ್ಯ 122.15 ಅಡಿ ನೀರಿನ ಸಂಗ್ರಹವಿದೆ ಎಂದು ವಿವರಿಸಿದೆ. ಜಲಾಶಯಕ್ಕೆ 25757 ಕ್ಯೂಸೆಕ್ ಒಳಹರಿವು ದಾಖಲಾಗಿದ್ದು, ನದಿ, ನಾಲೆ ಹಾಗೂ ಕುಡಿಯುವ ನೀರಿಗೆ 46304 ಕ್ಯೂಸೆಕ್ ನೀರಿಗೆ ಹೊರ ಬಿಡಲಾಗುತ್ತಿದೆ. ಜಲಾಶಯದ ಗರಿಷ್ಠ ನೀರಿನ ಸಂಗ್ರಹ 49.452 ಟಿಎಂಸಿ ಪೈಕಿ ಸದ್ಯ 45.832 ಟಿಎಂಸಿ ನೀರಿನ ಸಂಗ್ರಹವಿದ್ದು, ಅದರಲ್ಲಿ ಬಳಕೆಗೆ 25.757 ಟಿಎಂಸಿ ನೀರಿದೆ ಎಂದು ನಿಗಮ ತಿಳಿಸಿದೆ.