ಸಿದ್ಧಾಪುರ: ಮುಸೆಗಾರದಲ್ಲಿ ಮನೆಯಂಗಳಕ್ಕೆ ಆಗಮಿಸಿದ ಕರಿ ಚಿರತೆ, ಸಿಸಿಟಿವಿಯಲ್ಲಿ ದೃಶ್ಯ ಸೆರೆ
ಸಿದ್ದಾಪುರ : ತಾಲೂಕಿನ ಮುಸೆಗಾರ ದಲ್ಲಿ ಅಪರೂಪದ ಕರಿಚಿರತೆ ಕಾಣಿಸಿಕೊಂಡಿದ್ದು, ಸಿಸಿಟಿವಿಯಲ್ಲಿ ದೃಶ್ಯ ದಾಖಲಾಗಿದೆ. ಈ ಹಿಂದೆ ಇದೇ ಗ್ರಾಮದಲ್ಲಿ ಎರಡು ಬಾರಿ ಕರಿ ಚಿರತೆ ಕಾಣಿಸಿಕೊಂಡಿತ್ತು. ಪ್ರತಿ ಬಾರಿಯೂ ಒಂದೊಂದು ನಾಯಿಯನ್ನ ಹೊತ್ತೊಯ್ದಿತ್ತು. ಇದರಿಂದ ಮತ್ತೆ ನಾಯಿಯ ಹುಡುಕಾಟ ನಡೆಸಿ ಬಂದ ಕಪ್ಪು ಚಿರತೆ ಗ್ರಾಮಕ್ಕೆ ಬಂದಿದ್ದು, ಶನಿವಾರ ರಾತ್ರಿ 10.30 ಗಂಟೆ ಹೊತ್ತಿಗೇ ಮನೆಯ ಅಂಗಳಕ್ಕೆ ಬಂದಿರುವುದು ಸಿಸಿಟಿವಿಯಲ್ಲಿ ದಾಖಲಾಗಿದೆ. ಕರಿಚಿರತೆ ಬಂದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾದ ಕಾರಣ, ಪದೇ ಪದೇ ಚಿರತೆಯ ಅಗಮನದಿಂದಾಗಿ ಮನೆಯವರು ಬೆದರಿದ್ದಾರೆ.