ಶಿವಮೊಗ್ಗ: ಆಗುಂಬೆ ಘಾಟ್‌ನಲ್ಲಿ ಓಮಿನಿ ಕಾರಿನ ಮೇಲೆ ಮರ ಬಿದ್ದು ಸಂಚಾರ ಅಸ್ತವ್ಯಸ್ತ
ತೀರ್ಥಹಳ್ಳಿ ತಾಲೂಕಿನ ಆಗುಂಬೆ ಘಾಟಿಯಲ್ಲಿ ಓಮಿನಿ ಕಾರ್ ಮೇಲೆ ಬೃಹತ್ ಮರವೊಂದು ಉರುಳಿ ಬಿದ್ದು ಸಂಚಾರ ಅಸ್ತವ್ಯಸ್ತವಾಗಿರುವ ಘಟನೆ ಗುರುವಾರ ನಡೆದಿದೆ. ಆಗುಂಬೆಯ ನಾಲ್ಕನೇ ತಿರುವಿನಲ್ಲಿ ಈ ಘಟನೆ ಜರುಗಿದ್ದು, ಮರ ಬಿದ್ದ ಪರಿಣಾಮ ಓಮಿನಿ ಕಾರಿನ ಮುಂಭಾಗ ಸಂಪೂರ್ಣ ಜಖಂ ಆಗಿದೆ. ಕಾರಿನಲ್ಲಿ ಇದ್ದ ಸವಾರರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ನಾಲ್ಕನೇ ತಿರುವಿನಲ್ಲಿ ಮರ ಬಿದ್ದ ಪರಿಣಾಮ ಸಂಚಾರ ಬಂದ್ ಆಗಿದ್ದು, ಮರ ತೆರವುಗೊಳಿಸುವವರೆಗೆ ಸಂಚಾರ ಅಸ್ತವ್ಯಸ್ತವಾಗಲಿದೆ. ಸ್ಥಳೀಯರು ಮರ ತೆರವುಗೊಳಿಸಲು ಹರಸಾಹಸ ಪಡುತ್ತಿದ್ದಾರೆ.