ಶಿವಮೊಗ್ಗ: ಸಾಗರದ ಹೊಳೆ ಬಾಗಿಲು ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಧಾರಾಕಾರ ಮಳೆಯಿಂದಾಗಿ ಧರೆಗುರುಳಿದ ಹತ್ತಕ್ಕೂ ಹೆಚ್ಚು ವಿದ್ಯುತ್ ಕಂಬಗಳು
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹೊಳೆ ಬಾಗಿಲಿನ ಸಮೀಪದಲ್ಲಿ ಇರುವಂತಹ ರಾಷ್ಟೀಯ ಹೆದ್ದಾರಿಯಲ್ಲಿ ಧಾರಾಕಾರ ಮಳೆಯಿಂದಾಗಿ ಹತ್ತಕ್ಕೂ ಹೆಚ್ಚು ವಿದ್ಯುತ್ ಕಂಬಗಳು ದೊರೆಗೆ ಉರುಳಿ ಬಿದ್ದಿರುವಾಗ ಘಟನೆ ಗುರುವಾರ ಜರುಗಿದೆ. ಸಾಗರ ತಾಲೂಕಿನ ಹೊಳೆಬಾಗಿಲು ಕಸಬಳ್ಳಿ ತುಮರಿ ರಸ್ತೆಗೆ ಅಡ್ಡಲಾಗಿ ಮುರಳಿ ಬಿದ್ದಿರುವ ವಿದ್ಯುತ್ ಕಂಬಗಳಿಂದ ವಾಹನ ಸಂಚಾರಕ್ಕೆ ಆಡಚಣೆ ಉಂಟಾಗಿದ್ದು ಮೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ.