ವಿಜಯಪುರ: ನವೆಂಬರ್ 14 ಕೆಪಿಎಸ್ಸಿ ಪರೀಕ್ಷೆ: ವಿಜಯಪುರದಲ್ಲಿ ಸಕಲ ಸಿದ್ಧತೆ, ಅಭ್ಯರ್ಥಿಗಳಿಗೆ ಕಟ್ಟುನಿಟ್ಟಿನ ಸೂಚನೆ
ನವೆಂಬರ್ 14ರ ಕೆಪಿಎಸ್ಸಿ ಪರೀಕ್ಷೆಗೆ ವಿಜಯಪುರ ಸಜ್ಜಾಗಿದೆ. 20 ಕೇಂದ್ರಗಳಲ್ಲಿ 8,117 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದು, ಪಾರದರ್ಶಕತೆಗೆ ಜಿಲ್ಲಾಡಳಿತ ಕ್ರಮ ಕೈಗೊಂಡಿದೆ. ಅಭ್ಯರ್ಥಿಗಳು ಹಾಲ್ ಟಿಕೆಟ್, ಐಡಿ ಕಾರ್ಡ್ ಮತ್ತು ಪೆನ್ ಮಾತ್ರ ತರಲು ಅವಕಾಶವಿದ್ದು, ಮೊಬೈಲ್ ಸೇರಿದಂತೆ ಇತರೆ ವಸ್ತುಗಳಿಗೆ ನಿಷೇಧ ಹೇರಲಾಗಿದೆ.