ಬೆಂಗಳೂರು ಉತ್ತರ: ಒಳ ಮೀಸಲಾತಿ ಸಂಬಂಧಿಸಿ ಪ್ರಧಾನಿ ಮೋದಿ ಅಫಿಡವಿಟ್ ಹಾಕಿದ್ರು: ನಗರದಲ್ಲಿ ವಿಪಕ್ಷ ನಾಯಕ ಆರ್.ಅಶೋಕ್
ಒಳ ಮೀಸಲಾತಿ ವಿಚಾರವಾಗಿ ವಿಧಾನಸೌಧದಲ್ಲಿ ಬುಧವಾರ ಸಂಜೆ 7 ಗಂಟೆ ಸುಮಾರಿಗೆ ಮಾಧ್ಯಮಗಳ ಜೊತೆ ಮಾತನಾಡಿದ ವಿಪಕ್ಷ ನಾಯಕ ಆರ್ ಅಶೋಕ್ ಅವರು, ಒಳ ಮೀಸಲಾತಿ 30 ವರ್ಷಗಳಿಂದ ನಡೆಯುತ್ತಿರೋ ಹೋರಾಟ, ಬೊಮ್ಮಾಯಿ ಅವರು ಸಿಎಂ ಆಗಿದ್ದಾಗ ನ್ಯಾಯ ಕೊಡಿಸಲು ಮಾಡಿದ್ರು. ನರೇಂದ್ರ ಮೋದಿ ಸರ್ಕಾರ ಸುಪ್ರೀಂ ಕೋರ್ಟಿಗೆ ಒಳ ಮೀಸಲಾತಿ ನೀಡುವ ಬಗ್ಗೆ ಅಫಿಡವಿಟ್ ಹಾಕಿದ್ರು. ಇದನ್ನ ಮಾಡಿದ್ದು ಪ್ರಧಾನಿ ನರೇಂದ್ರ ಮೋದಿ. ರಾಜ್ಯ ಸರ್ಕಾರ ಇದಕ್ಕೆ ವಕೀಲರನ್ನೂ ನೇಮಕ ಮಾಡಲಿಲ್ಲ. ಸಿದ್ದರಾಮಯ್ಯ ಬಾಯಿ ಮುಚ್ಚಿಕೊಂಡಿದ್ರು. ಜೇನು ಗೂಡಿಗೆ ಕಲ್ಲು ಹೊಡೆದ್ರಿ ಅಂತ ಅಂದು ಹೇಳಿಕೊಂಡಿದ್ರು. ನೀವು ಈಗ ನಿಮ್ಮ ಮನಸ್ಸಿಗೆ ಬಂದಂತೆ ಮಾಡಿದ್ದೀರ ಎಂದು ಕಿಡಿಕಾರಿದರು.