ಬೆಂಗಳೂರು ಉತ್ತರ: ರಾಜಣ್ಣ ಪರ ದೆಹಲಿಯಲ್ಲಿ ಬ್ಯಾಟಿಂಗ್ ಮಾಡಲು ವಾಲ್ಮೀಕಿ ಸಮುದಾಯ ಸಿದ್ದ: ನಗರದಲ್ಲಿ ಸತೀಶ್ ಜಾರಕಿಹೊಳಿ
ಕೆ.ಎನ್ ರಾಜಣ್ಣ ಅವರನ್ನ ಬುಧವಾರ ಸಂಜೆ 4 ಗಂಟೆ ಸುಮಾರಿಗೆ ಮೌಂಟ್ ಕಾರ್ಮಲ್ ರಸ್ತೆ ಬಳಿ ಸತೀಶ್ ಜಾರಕಿಹೊಳಿ ಅವರು ಭೇಟಿ ಮಾಡಿ ಚರ್ಚೆ ನಡೆಸಿದ್ದು, ಈ ಕುರಿತಂತೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇದೊಂದು ಭೇಟಿ ಅಷ್ಟೇ. ಅಧಿಕಾರ ಇದ್ದಾಗ ಮಾತ್ರ ಭೇಟಿ ಮಾಡ್ತಾರೆ. ಅಧಿಕಾರ ಹೋದ ಮೇಲೂ ಸ್ನೇಹದ ಸಂಕೇತವಾಗಿ ಭೇಟಿ ಮಾಡಿದ್ದೇವೆ. ರಾಜಣ್ಣ ಅವರು ದೆಹಲಿ ಭೇಟಿ ಮಾಡುತ್ತೇವೆ ಅಂದಿದ್ದಾರೆ. ಅಧಿವೇಶನ ಮುಗಿದ ಬಳಿಕ ದೆಹಲಿಗೆ ನಿಯೋಗ ತೆರಳುತ್ತೇವೆ. ರಾಜಣ್ಣ ಪರ ದೆಹಲಿಯಲ್ಲಿ ಬ್ಯಾಟಿಂಗ್ ಮಾಡಲು ವಾಲ್ಮೀಕಿ ಸಮುದಾಯದ ನಾಯಕರು ನಿರ್ಧಾರ ಮಾಡಲಾಗಿದೆ ಎಂದರು.