ಮಡಿಕೇರಿ: ಮಡಿಕೇರಿ ದಸರಾ ವೈಭವಕ್ಕೆ ಕ್ಷಣಗಣನೆ: ದಶಮಂಟಪಗಳ ಪ್ರದರ್ಶನಕ್ಕೆ ಸಜ್ಜಾದ ಮಂಜಿನ ನಗರಿ
ಮಡಿಕೇರಿಯಲ್ಲಿ ದಸರಾ ಸಂಭ್ರಮ ಜೋರಾಗಿದೆ. ದಶಮಂಟಪಗಳ ಪ್ರದರ್ಶನಕ್ಕೆ ಸಿದ್ಧತೆಗಳು ಅಂತಿಮ ಹಂತ ತಲುಪಿವೆ. ಪೌರಾಣಿಕ ಕಥೆಗಳು, ಆಕರ್ಷಕ ಕಲಾಕೃತಿ ಮತ್ತು ದೀಪಾಲಂಕಾರದ ವೈಭವವನ್ನು ಕಣ್ತುಂಬಿಕೊಳ್ಳಲು ಸಾರ್ವಜನಿಕರು ಹಾಗೂ ಪ್ರವಾಸಿಗರು ಕಾತರದಿಂದ ಕಾಯುತ್ತಿದ್ದಾರೆ.