ಆನೇಕಲ್: ಆನೇಕಲ್ ನಲ್ಲಿ ನ್ಯಾಯಾಧೀಶರ ಮನೆಗೆ ನುಗ್ಗಲು ಯತ್ನಿಸಿದ ಯುವಕನ ಬಂಧನ, ಹುಚ್ಚ ವಿನಯ್ ಬಂಧಿತ ಆರೋಪಿ
ಆನೇಕಲ್ ನಲ್ಲಿ ನ್ಯಾಯಾಧೀಶರ ಮನೆಯ ಬಾಗಿಲು ಒಡೆದು ಒಳ ನುಗ್ಗಲು ಯತ್ನಿಸಿದ ಯುವಕನೊಬ್ಬನನ್ನ ಆನೇಕಲ್ ಪೊಲೀಸರು ಬಂಧಿಸಿದ್ದಾರೆ. ಹುಚ್ಚ ವಿನಯ್ ಬಂಧಿತ ಆರೋಪಿ, ನ್ಯಾಯಾಧೀಶರಾ ಮನೆಯ ಮುಂಬಾಗಿಲ ಗಾಜನ್ನು ಒಡೆದು ಒಳನುಗ್ಗಲು ಯತ್ನಿಸಿದ ಹಿನ್ನೆಲೆಯಲ್ಲಿ ವಿನಯ್ ಎಂಬಾತನನ್ನ ಪೊಲೀಸರು ಬಂಧಿಸಿದ್ದಾರೆ. ಯಾವ ಉದ್ದೇಶಕ್ಕೆ ವಿನಯ್ ನ್ಯಾಯಾಧೀಶರ ಮನೆಗೆ ಬಂದಿದ್ದ ಎಂಬ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ