ಉಡುಪಿ: ಕಾಪು: ಎಕ್ಸ್ಪ್ರೆಸ್ ಬಸ್-ಬೈಕ್ ಅಪಘಾತ; ಪ್ರಾಣಾಪಾಯದಿಂದ ಪಾರಾದ ಸವಾರ
Udupi, Udupi | Sep 28, 2026 ಉಡುಪಿಯ ಕಾಪು ಪೆಟ್ರೋಲ್ ಬಂಕ್ ಸಮೀಪ ಎಕ್ಸ್ಪ್ರೆಸ್ ಬಸ್ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿದೆ. ಬಸ್ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ರಸ್ತೆಗೆ ಎಸೆಯಲ್ಪಟ್ಟಿದ್ದು, ಸ್ಥಳೀಯರು ಸವಾರನನ್ನು ರಕ್ಷಿಸಿದ್ದಾರೆ. ಕಾಪು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.