ಮಳೆಗಾಲದ ಸ್ಪರ್ಶ: ಕಣ್ಣುಮನ ಸೆಳೆಯುತ್ತಿರುವ ನಿಸರ್ಗದ ಹಸಿರು ಸೌಂದರ್ಯ
ವಿಶೇಷ ವರದಿ:
ಇತ್ತೀಚೆಗೆ ಸುರಿದ ಸಾಲು ಸಾಲು ಮಳೆಯಿಂದಾಗಿ ಸುತ್ತಮುತ್ತಲಿನ ಗುಡ್ಡ-ಬೆಟ್ಟಗಳು ಮೈತುಂಬಾ ಹಸಿರನ್ನು ಹೊದ್ದು ಕಂಗೊಳಿಸುತ್ತಿವೆ. ದಿನನಿತ್ಯದ ಜಂಜಾಟದಿಂದ ಕೊಂಚ ಬಿಡುವು ಮಾಡಿಕೊಂಡು ಪ್ರಯಾಣಿಸುವ ಸಾರ್ವಜನಿಕರಿಗೆ ಹಾಗೂ ಪ್ರಕೃತಿ ಪ್ರಿಯರಿಗೆ ಈ ದೃಶ್ಯಾವಳಿಗಳು ಅತೀವ ಆನಂದ ನೀಡುತ್ತಿವೆ.
ಮಳೆಯ ತಂಪಾದ ವಾತಾವರಣದಿಂದಾಗಿ ಒಣಗಿದ್ದ ಗಿಡ-ಮರಗಳೆಲ್ಲವೂ ಚಿಗುರೊಡೆದು ಇಡೀ ಪರಿಸರವೇ ಹಸಿರುಮಯವಾಗಿದೆ. ಆಕಾಶದಲ್ಲಿ ಕವಿದಿರುವ ತಂಪಾದ ಮೋಡಗಳು, ಸಾಲು ಸಾಲು ಬೆಟ್ಟಗಳು, ಬಂಡೆಕಲ್ಲುಗಳ ನಡುವೆ ನಗುತಿರುವ ಹಸಿರು ಹೊಲಗಳು ಪ್ರಕೃತಿಯ ಸೌಂದರ್ಯವನ್ನು ಇಮ್ಮಡಿಗೊಳಿಸಿವೆ.
ಕಣ್ಣುಮನ ಸೆಳೆಯುವ ಹಸಿರು: ಮಳೆಯ ಆಗಮನದಿಂದ ಗುಡ್ಡಗಾಡು ಪ್ರದೇಶಗಳು ನವಚೈತನ್ಯ ಪಡೆದುಕೊಂಡಿದ್ದು, ಪ್ರಕೃತಿಯ ಮಡಿಲು ಸೌಂದರ್ಯದ ಗನಿಯಾಗಿದೆ.
ಆಹ್ಲಾದಕರ ವಾತಾವರಣ: ಮೋಡಕವಿದ ಆಕಾಶ ಮತ್ತು ತಂಪಾದ ಗಾಳಿ ಸುತ್ತಮುತ್ತಲಿನ ಪರಿಸರಕ್ಕೆ ಶಾಂತಮಯ ಕಳೆಯನ್ನು ತಂದಿತ್ತಿದೆ.
ಪ್ರಯಾಣಿಕರಿಗೆ ಮುದ: ಈ ಮಾರ್ಗವಾಗಿ ಸಂಚರಿಸುವ ವಾಹನ ಸವಾರರು ಹಾಗೂ ಸಾರ್ವಜನಿಕರು ಪ್ರಕೃತಿಯ ಈ ಸೌಂದರ್ಯವನ್ನು ಕಣ್ಣುಂಬಿಕೊಂಡು ಆನಂದಿಸುತ್ತಿದ್ದಾರೆ.
Yadgir, Yadgir | Aug 3, 2026