ಶಿರಸಿ: ಬನವಾಸಿಯ ಗುಡ್ನಾಪುರದಲ್ಲಿ ಬಾರಿ ಮಳೆಗೆ ಕುಸಿದು ಬಿದ್ದ ದನದ ಕೊಟ್ಟಿಗೆ
ಶಿರಸಿ: ಕಳೆದ ಎರಡು ಮೂರು ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಗೆ ತಾಲೂಕಿನ ಬನವಾಸಿಯಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ಭಾರಿ ಗಾಳಿ ಮಳೆಗೆ ಬನವಾಸಿಯ ಗುಡ್ನಾಪುರ ಗ್ರಾಮದ ಸುಭದ್ರಾ ನಾಯ್ಕ ಎಂಬುವವರ ದನದ ಕೊಟ್ಟಿಗೆ ಸಂಪೂರ್ಣವಾಗಿ ಕುಸಿದು ಬಿದ್ದು, ಅಂದಾಜು 30 ಸಾವಿರ ರೂ. ಹಾನಿಯಾಗಿದ್ದು, ಆಕಳು ಹಾಗೂ 2 ಕರುಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಭಾಶಿ ಗ್ರಾಮದ ನೀಲಾವತಿ ಗಜಾನನ ನಾಯ್ಕ ಎಂಬವರ ಮನೆಯ ಗೋಡೆ ಕುಸಿದು ಅಂದಾಜು 10 ಸಾವಿರ ರೂ. ಹಾನಿಯಾಗಿದ್ದು, ಈ ಬಗ್ಗೆ ಗುರುವಾರ ಸಂಜೆ 4:00 ಗಂಟೆ ಸುಮಾರಿಗೆ ಮಾಧ್ಯಮಕ್ಕೆ ಮಾಹಿತಿ ಲಭ್ಯವಾಗಿದೆ.