ಶಿರಸಿ: ಅಬ್ಬರದ ಗಾಳಿ ಮಳೆಯಿಂದ ತಾಲೂಕಿನ ಕಾನಳ್ಳಿ ಸೇರಿದಂತೆ ವಿವಿಧೆಡೆ ಮನೆ, ಕೊಟ್ಟಿಗೆಗೆ ಹಾನಿ
ಶಿರಸಿ : ಶಿರಸಿ ತಾಲೂಕಿನಲ್ಲಿ ಅಬ್ಬರದ ಗಾಳಿ ಮಳೆಯಿಂದಾಗಿ ವಿವಿಧೆಡೆ ಅಪಾರ ಪ್ರಮಾಣದಲ್ಲಿ ಹಾನಿಯುಂಟಾಂಗಿದೆ. ಭಾರಿ ಮಳೆಯ ಪರಿಣಾಮ ಘಟ್ಟದ ಮೇಲಿನ ಅಘನಾಶಿನಿ, ಶಾಲ್ಮಲಾ, ಬೇಡ್ತಿ ಹಾಗೂ ವರದಾ ನದಿಯಲ್ಲಿ ನೀರು ತುಂಬಿ ಹರಿಯುತ್ತಿದೆ. ಗುರವಾರ ಸುರಿದ ಮಳೆ - ಗಾಳಿಯಿಂದ ಕಾನಳ್ಳಿಯ ನಾಗಾ ಸೋಮ ದೇವಾಡಿಗ ಇವರ ವಾಸ್ತವ್ಯದ ಮನೆಯ ಸಮೀಪದ ದನದ ಕೊಟ್ಟಿಗೆ ಮೇಲೆ ಮಾವಿನಮರ ಬಿದ್ದು ಅಂದಾಜು ೩೦ ಸಾವಿರ ರೂ., ಟಿಪ್ಪುನಗರದ ಅಬ್ದುಲ್ ಜಿಲಾನಿ ಅವರ ವಾಸ್ತವ್ಯ ಮನೆಯ ಗೋಡೆ ಕುಸಿದು ೩೦ ಸಾವಿರ ರೂ., ಗುಡ್ನಾಪುರದ ಸುಭದ್ರಾ ಸುರೇಶ ನಾಯ್ಕ ಅವರ ದನದ ಕೊಟ್ಟಿಗೆ ಸಂಪೂರ್ಣವಾಗಿ ಬಿದ್ದು ೩೦ ಸಾವಿರ ರೂ., ಭಾಶಿಯ ನೀಲಾವತಿ ಗಜಾನನ ನಾಯ್ಕ ವಾಸ್ತವ್ಯದ ಮನೆ ಗೋಡೆ ಕುಸಿದು ೧೦ ಸಾವಿರ ರೂ., ಹಾನಿಯಾಗಿದೆ.