ಹೊಸಪೇಟೆ: ರ್ಯಾಪಿಡೋ ಮೂಲಕ ಅಕ್ರಮ ಬಾಡಿಗೆ: 3 ಬೈಕ್ಗಳನ್ನು ಜಪ್ತಿ ಮಾಡಿದ ಸಾರಿಗೆ ಅಧಿಕಾರಿಗಳು
ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ರ್ಯಾಪಿಡೋ ಆ್ಯಪ್ ಬಳಸಿ ಸಾರಿಗೆಯೇತರ ಬೈಕ್ಗಳನ್ನು ಬಾಡಿಗೆಗೆ ನೀಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾರಿಗೆ ಅಧಿಕಾರಿಗಳು ಮೂರು ಬೈಕ್ಗಳನ್ನು ವಶಪಡಿಸಿಕೊಂಡಿದ್ದಾರೆ. ಪ್ರಾದೇಶಿಕ ಸಾರಿಗೆ ಇಲಾಖೆಯ ಹಿರಿಯ ಮೋಟಾರ್ ವಾಹನ ನಿರೀಕ್ಷಕ ಪ್ರದೀಪ್ ಹಡಗಲಿ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದೆ.