ಬಂಟ್ವಾಳ: ವಿಕಾಸಂ ಸೇವಾ ಫೌಂಡೇಶನ್ನಲ್ಲಿ ಅರ್ಥಪೂರ್ಣ ಶಿಕ್ಷಕರ ದಿನಾಚರಣೆ
ಬಂಟ್ವಾಳದ ವಿಕಾಸಂ ಸೇವಾ ಫೌಂಡೇಶನ್ನಲ್ಲಿ ಶಿಕ್ಷಕರ ದಿನಾಚರಣೆ ನಡೆಯಿತು. ಈ ವೇಳೆ ವಿಶೇಷ ಶಿಕ್ಷಕರ ಸೇವೆಯನ್ನು ಗಣ್ಯರು ಶ್ಲಾಘಿಸಿದರು. ದಿವ್ಯಾಂಗ ಮಕ್ಕಳಿಗಾಗಿ ಎಐ ತಂತ್ರಜ್ಞಾನದ ಬಳಕೆ ಹಾಗೂ ಆಕ್ಯುಪೇಶನ್ ಥೆರಪಿಯ ಮಹತ್ವದ ಕುರಿತು ಚರ್ಚಿಸಲಾಯಿತು. ಹಿರಿಯ ಶಿಕ್ಷಕಿ ರೇಣುಕಾ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.