ವಿಜಯಪುರ: ವಿಜಯಪುರದಲ್ಲಿ 2027 ಜ.29ಕ್ಕೆ ಬೃಹತ್ ಧಾರ್ಮಿಕ ಸಮಾವೇಶ: ಮಲ್ಲಿಕಾರ್ಜುನ ಮಹಾಸ್ವಾಮೀಜಿ ಮಾಹಿತಿ
ಮಕ್ಕಳಲ್ಲಿ ಸಂಸ್ಕಾರ ಮತ್ತು ಮೌಲ್ಯಗಳನ್ನು ಬೆಳೆಸುವ ಉದ್ದೇಶದಿಂದ ವಿಜಯಪುರದಲ್ಲಿ ಜನವರಿ 29, 2027 ರಂದು ಬೃಹತ್ ಧಾರ್ಮಿಕ ಸಮಾವೇಶ ಆಯೋಜಿಸಲಾಗಿದೆ. ಮಠಾಧೀಶರ ಒಕ್ಕೂಟ ಮತ್ತು ಭಾರತೀಯ ಸಂತ ಮಹಾಪರಿಷತ್ ವತಿಯಿಂದ ಈ ಕಾರ್ಯಕ್ರಮ ನಡೆಯಲಿದೆ ಎಂದು ಸರ್ಪಭೂಷಣ ಮಠದ ಮಲ್ಲಿಕಾರ್ಜುನ ಮಹಾಸ್ವಾಮೀಜಿ ತಿಳಿಸಿದ್ದಾರೆ.