Public App Logo
Jansamasya
News
पुलिस
Maharashtra
Bjp
National
Police
Bihar
India
Gujarat
भाजपा
Congress
Modi
Delhi
Viral
Bollywood
दिल्ली
Patna
Breakingnews
Narendramodi
Madhya_pradesh
Madhyapradesh
Pmmodi
Rahulgandhi
यूपी
Bhopal
सपा
Uttarpradesh
Haryana
Hardoi

*ಅಗಸ್ಟ್ 03 ವರೆಗೆ ಶೇ.82.33 ಗಣತಿ ನಮೂನೆಗಳ ಗಣಕೀಕರಣ* *ಧಾರವಾಡ (ಕರ್ನಾಟಕ ವಾರ್ತೆ) ಅ.03:* ಜಿಲ್ಲೆಯಲ್ಲಿ ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯ ಪ್ರಗತಿಯಲ್ಲಿದ್ದು, 16,21,961 ಗಣತಿ ನಮೂನೆಗಳನ್ನು ವಿತರಿಸಲಾಗಿದ್ದು, ಅಗಸ್ಟ್ 03 2026 ವರೆಗೆ ಒಟ್ಟು 13,35,368 ಗಣತಿ ನಮೂನೆಗಳನ್ನು ಗಣಕೀಕರಣಗೊಳಿಸಲಾಗಿದೆ. ಶೇ. 82.33 ರಷ್ಟು ಗಣಕೀಕರಣಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಗೈರು, ಸ್ಥಳಾಂತರ, ಮರಣ ಹಾಗೂ ದ್ವಿಪ್ರತಿ ಪ್ರಕರಣಗಳಿಗೆ ಸಂಬ0ಧಿಸಿದ0ತೆ ಒಟ್ಟು 2,86,177 ಮತದಾರರನ್ನು ಗುರುತಿಸಲಾಗಿದೆ. ಇದರಲ್ಲಿ 1,35,875 ಶಾಶ್ವತ ವಲಸೆ ಹಾಗೂ 52,124 ಮರಣ ಹೊಂದಿದ ಪ್ರಕರಣಗಳು, 25,799 ದ್ವಿಪ್ರತಿಗಳು, 70,263 ಗೈರು ಹಾಗೂ ಇತರೆ 2,116 ಸೇರಿವೆ. 69-ನವಲಗುಂದ ವಿಧಾನಸಭಾ ಕ್ಷೇತ್ರದಲ್ಲಿ 1,93,387 ನಮೂನೆಗಳು ಗಣಕೀಕೃತಗೊಂಡಿವೆ. 70-ಕುಂದಗೋಳ ವಿಧಾನಸಭಾ ಕ್ಷೇತ್ರದಲ್ಲಿ 1,77,741 ನಮೂನೆಗಳು ಗಣಕೀಕೃತಗೊಂಡಿವೆ. 71-ಧಾರವಾಡ ವಿಧಾನಸಭಾ ಕ್ಷೇತ್ರದಲ್ಲಿ 1,90,910 ನಮೂನೆಗಳು ಗಣಕೀಕೃತಗೊಂಡಿವೆ. 72-ಹುಬ್ಬಳ್ಳಿ ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದಲ್ಲಿ 1,78,638 ನಮೂನೆಗಳು ಗಣಕೀಕೃತಗೊಂಡಿವೆ. 73-ಹುಬ್ಬಳ್ಳಿ-ಧಾರವಾಡ ಕೇಂದ್ರ ವಿಧಾನಸಭಾ ಕ್ಷೇತ್ರದಲ್ಲಿ 1,97,844 ನಮೂನೆಗಳು ಗಣಕೀಕೃತಗೊಂಡಿವೆ. 74-ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದಲ್ಲಿ 2,10,527 ನಮೂನೆಗಳು ಗಣಕೀಕೃತಗೊಂಡಿವೆ. 75-ಕಲಘಟಗಿ ವಿಧಾನಸಭಾ ಕ್ಷೇತ್ರದಲಿ 1,86,321 ನಮೂನೆಗಳು ಗಣಕೀಕೃತಗೊಂಡಿವೆ. ಮತಗಟ್ಟೆ ಮಟ್ಟದ ಅಧಿಕಾರಿಗಳು (ಬಿಎಲ್‍ಒ) ಮತದಾರರ ಮನೆ-ಮನೆಗಳಿಗೆ ಭೇಟಿ ನೀಡಿದ ಅವಧಿಯಲ್ಲಿ ಜಿಲ್ಲೆಯ ಸಾರ್ವಜನಿಕರು, ಮತದಾರರು ತಮ್ಮ ಅವಶ್ಯಕ ಮಾಹಿತಿಗಳನ್ನು ಭರಣಾ ಮಾಡಿದ ಏಣಿಕೆ, ಗಣತಿ ನಮೂನೆಗಳನ್ನು (Enumeration Forms) BLOರವರಿಗೆ ನೀಡಿ ಸಹಕರಿಸಬೇಕೆಂದು ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. (ಡಿ.ಸಿ ಅವರ ಫೋಟೊ ಇದೆ) ******

Yadgir, Yadgir | Aug 3, 2026

MORE NEWS

ತಾಯಿಯ ಪ್ರೀತಿಯ ಮುಂದೆ ಅಧಿಕಾರವೂ ಚಿಕ್ಕದು: ಸಚಿವನಾದ ಮಗನಿಗೆ ಮುತ್ತಿಟ್ಟು ಆಶೀರ್ವದಿಸಿದ ತಾಯಿ

ಬೆಂಗಳೂರು :, ಆ.3: ಜಗತ್ತಿನಲ್ಲಿ ತಾಯಿಯ ಪ್ರೀತಿಗಿಂತ ಶ್ರೇಷ್ಠವಾದ ಸಂಪತ್ತು ಮತ್ತೊಂದಿಲ್ಲ ಎಂಬುದನ್ನು ಮನದಟ್ಟುಗೊಳಿಸುವ ಭಾವನಾತ್ಮಕ ಕ್ಷಣ ಸಚಿವರ ಪ್ರಮಾಣವಚನ ಕಾರ್ಯಕ್ರಮದ ಬಳಿಕ ಕಂಡುಬಂದಿತು.

ಇತ್ತೀಚೆಗೆ ರಾಜ್ಯ ಸಚಿವ ಸಂಪುಟಕ್ಕೆ ಸೇರ್ಪಡೆಯಾದ ಮಗನನ್ನು ಕಂಡ ತಾಯಿ ಭಾವುಕರಾಗಿ, ಆತನನ್ನು ಆತ್ಮೀಯವಾಗಿ ಅಪ್ಪಿಕೊಂಡು ಕೆನ್ನೆಗೆ ಮುತ್ತಿಟ್ಟು ಆಶೀರ್ವದಿಸಿದರು. ಈ ಅಪರೂಪದ ದೃಶ್ಯ ನೆರೆದಿದ್ದವರ ಮನಸೂರೆಗೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿಯೂ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.

ಮಗ ಎಷ್ಟೇ ಉನ್ನತ ಹುದ್ದೆಗೆ ಏರಿದರೂ ತಾಯಿಯ ಕಣ್ಣಿಗೆ ಆತ ಎಂದಿಗೂ ಮುದ್ದಿನ ಮಗನೇ ಎಂಬುದನ್ನು ಈ ಕ್ಷಣ ಮತ್ತೊಮ್ಮೆ ಸಾಬೀತುಪಡಿಸಿತು. ಮಗನ ಸಾಧನೆಗೆ ಹೆಮ್ಮೆಗೊಂಡ ತಾಯಿ, ಅವನ ಮುಂದಿನ ಜನಸೇವೆಯ ಪಯಣ ಯಶಸ್ವಿಯಾಗಲಿ ಎಂದು ಹಾರೈಸಿದರು.

ಈ ಭಾವನಾತ್ಮಕ ದೃಶ್ಯವನ್ನು ಕಂಡ ಅಭಿಮಾನಿಗಳು ಹಾಗೂ ಬೆಂಬಲಿಗರು ತಾಯಿ-ಮಗನ ನಡುವಿನ ಪ್ರೀತಿಯ ಬಾಂಧವ್ಯವನ್ನು ಕೊಂಡಾಡಿದರು. ಅಧಿಕಾರ, ಸ್ಥಾನಮಾನ ಮತ್ತು ವೈಭವಕ್ಕಿಂತ ತಾಯಿಯ ಆಶೀರ್ವಾದವೇ ಜೀವನದ ಅತಿದೊಡ್ಡ ಶಕ್ತಿ ಎಂಬ ಸಂದೇಶವನ್ನು ಈ ಘಟನೆ ಸಾರಿತು.

“ಸ್ಥಾನಮಾನಗಳು ತಾತ್ಕಾಲಿಕ; ತಾಯಿಯ ಮಮತೆ ಮತ್ತು ಆಶೀರ್ವಾದ ಮಾತ್ರ ಶಾಶ್ವತ. ಜನಸೇವೆಯ ಹಾದಿಯಲ್ಲಿ ತಾಯಿಯ ಆಶೀರ್ವಾದವೇ ಮಗನಿಗೆ ಅತಿದೊಡ್ಡ ಬಲ.”
B Z Zameer Ahmed Khan Fan Club #BzZameerAhmedkhan 
#MotherLove #ತಾಯಿಪ್ರೀತಿ #MotherBlessings #ಸಚಿವ #KarnatakaCabinet #KarnatakaPolitics #ಜನಸೇವೆ #ತಾಯಿಯಆಶೀರ್ವಾದ #EmotionalMoment #ViralNews #KannadaNews #KarnatakaNews #YadgirNews #ಯಾದಗೀರ್‌ನ್ಯೂಸ್ #YadgirHeadlines

ತಾಯಿಯ ಪ್ರೀತಿಯ ಮುಂದೆ ಅಧಿಕಾರವೂ ಚಿಕ್ಕದು: ಸಚಿವನಾದ ಮಗನಿಗೆ ಮುತ್ತಿಟ್ಟು ಆಶೀರ್ವದಿಸಿದ ತಾಯಿ ಬೆಂಗಳೂರು :, ಆ.3: ಜಗತ್ತಿನಲ್ಲಿ ತಾಯಿಯ ಪ್ರೀತಿಗಿಂತ ಶ್ರೇಷ್ಠವಾದ ಸಂಪತ್ತು ಮತ್ತೊಂದಿಲ್ಲ ಎಂಬುದನ್ನು ಮನದಟ್ಟುಗೊಳಿಸುವ ಭಾವನಾತ್ಮಕ ಕ್ಷಣ ಸಚಿವರ ಪ್ರಮಾಣವಚನ ಕಾರ್ಯಕ್ರಮದ ಬಳಿಕ ಕಂಡುಬಂದಿತು. ಇತ್ತೀಚೆಗೆ ರಾಜ್ಯ ಸಚಿವ ಸಂಪುಟಕ್ಕೆ ಸೇರ್ಪಡೆಯಾದ ಮಗನನ್ನು ಕಂಡ ತಾಯಿ ಭಾವುಕರಾಗಿ, ಆತನನ್ನು ಆತ್ಮೀಯವಾಗಿ ಅಪ್ಪಿಕೊಂಡು ಕೆನ್ನೆಗೆ ಮುತ್ತಿಟ್ಟು ಆಶೀರ್ವದಿಸಿದರು. ಈ ಅಪರೂಪದ ದೃಶ್ಯ ನೆರೆದಿದ್ದವರ ಮನಸೂರೆಗೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿಯೂ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ. ಮಗ ಎಷ್ಟೇ ಉನ್ನತ ಹುದ್ದೆಗೆ ಏರಿದರೂ ತಾಯಿಯ ಕಣ್ಣಿಗೆ ಆತ ಎಂದಿಗೂ ಮುದ್ದಿನ ಮಗನೇ ಎಂಬುದನ್ನು ಈ ಕ್ಷಣ ಮತ್ತೊಮ್ಮೆ ಸಾಬೀತುಪಡಿಸಿತು. ಮಗನ ಸಾಧನೆಗೆ ಹೆಮ್ಮೆಗೊಂಡ ತಾಯಿ, ಅವನ ಮುಂದಿನ ಜನಸೇವೆಯ ಪಯಣ ಯಶಸ್ವಿಯಾಗಲಿ ಎಂದು ಹಾರೈಸಿದರು. ಈ ಭಾವನಾತ್ಮಕ ದೃಶ್ಯವನ್ನು ಕಂಡ ಅಭಿಮಾನಿಗಳು ಹಾಗೂ ಬೆಂಬಲಿಗರು ತಾಯಿ-ಮಗನ ನಡುವಿನ ಪ್ರೀತಿಯ ಬಾಂಧವ್ಯವನ್ನು ಕೊಂಡಾಡಿದರು. ಅಧಿಕಾರ, ಸ್ಥಾನಮಾನ ಮತ್ತು ವೈಭವಕ್ಕಿಂತ ತಾಯಿಯ ಆಶೀರ್ವಾದವೇ ಜೀವನದ ಅತಿದೊಡ್ಡ ಶಕ್ತಿ ಎಂಬ ಸಂದೇಶವನ್ನು ಈ ಘಟನೆ ಸಾರಿತು. “ಸ್ಥಾನಮಾನಗಳು ತಾತ್ಕಾಲಿಕ; ತಾಯಿಯ ಮಮತೆ ಮತ್ತು ಆಶೀರ್ವಾದ ಮಾತ್ರ ಶಾಶ್ವತ. ಜನಸೇವೆಯ ಹಾದಿಯಲ್ಲಿ ತಾಯಿಯ ಆಶೀರ್ವಾದವೇ ಮಗನಿಗೆ ಅತಿದೊಡ್ಡ ಬಲ.” B Z Zameer Ahmed Khan Fan Club #BzZameerAhmedkhan #MotherLove #ತಾಯಿಪ್ರೀತಿ #MotherBlessings #ಸಚಿವ #KarnatakaCabinet #KarnatakaPolitics #ಜನಸೇವೆ #ತಾಯಿಯಆಶೀರ್ವಾದ #EmotionalMoment #ViralNews #KannadaNews #KarnatakaNews #YadgirNews #ಯಾದಗೀರ್‌ನ್ಯೂಸ್ #YadgirHeadlines

Yadgir, Yadgir | Aug 4, 2026

BIG BREAKING NEWS || ಗುರುಶಿಣಗಿ  ಬ್ಯಾರೇಜ್‌ನಿಂದ ನೀರಿನ ಹೊರಹರಿವು ಹೆಚ್ಚಳ: ನದಿ ಪಾತ್ರದ ಜನರಿಗೆ ಎಚ್ಚರಿಕೆ

ಯಾದಗಿರಿ, ಆ.3: ಯಾದಗಿರಿ ಬ್ಯಾರೇಜ್‌ಗೆ ಒಳಹರಿವು ಗಣನೀಯವಾಗಿ ಹೆಚ್ಚಾದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಬ್ಯಾರೇಜ್‌ನ ಒಟ್ಟು 20 ಗೇಟ್‌ಗಳ ಮೂಲಕ ನೀರನ್ನು ಹೊರಹರಿಸಲಾಗುತ್ತಿದೆ.

ಈ ಹಿಂದೆ ಸುಮಾರು 80 ಸಾವಿರ ಕ್ಯೂಸೆಕ್ ಪ್ರಮಾಣದಲ್ಲಿ ನೀರನ್ನು ಹೊರಬಿಡಲಾಗುತ್ತಿದ್ದು, ಇದೀಗ ಅದನ್ನು ಒಂದು ಲಕ್ಷ ಕ್ಯೂಸೆಕ್‌ಗೆ ಹೆಚ್ಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನದಿಯಲ್ಲಿ ನೀರಿನ ಹರಿವು ತೀವ್ರವಾಗಿ ಹೆಚ್ಚಿರುವುದರಿಂದ ರೈತರು, ಸಾರ್ವಜನಿಕರು ಹಾಗೂ ನದಿ ಪಾತ್ರದ ಗ್ರಾಮಗಳ ನಿವಾಸಿಗಳು ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು ಎಂದು ಜಿಲ್ಲಾ ಆಡಳಿತ ಹಾಗೂ ಸಂಬಂಧಿತ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಯಾರೂ ಸಹ ನದಿಗೆ ಇಳಿಯುವುದು, ಸೇತುವೆಗಳ ಮೇಲೆ ಅನಗತ್ಯವಾಗಿ ನಿಲ್ಲುವುದು ಅಥವಾ ನದಿ ತೀರದಲ್ಲಿ ಸಂಚರಿಸುವುದನ್ನು ತಪ್ಪಿಸಿ, ಮಕ್ಕಳನ್ನು ನದಿ ಸಮೀಪಕ್ಕೆ ಬಿಡದಂತೆ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ. ನದಿ ಪಾತ್ರದ ಜನರು ಅಧಿಕಾರಿಗಳ ಸೂಚನೆಗಳನ್ನು ಪಾಲಿಸಿ ಸುರಕ್ಷಿತವಾಗಿರಬೇಕು ಎಂದು ಮನವಿ ಮಾಡಲಾಗಿದೆ.

#BIGBREAKINGNEWS #ಯಾದಗಿರಿ #ಗುರುಶಿಣಗಿಬ್ಯಾರೇಜ್ #ಯಾದಗಿರಿಬ್ಯಾರೇಜ್ #ನೀರುಬಿಡುಗಡೆ #ಒಂದುಲಕ್ಷಕ್ಯೂಸೆಕ್ #ಭೀಮಾನದಿ #ನೆರೆಎಚ್ಚರಿಕೆ #FloodAlert #WaterRelease #YadgirNews #KarnatakaNews #RiverAlert #PublicSafety #BreakingNews #YadgirBreakingNews #YadgirHeadlines #KannadaNews #StaySafe #MonsoonUpdates

BIG BREAKING NEWS || ಗುರುಶಿಣಗಿ ಬ್ಯಾರೇಜ್‌ನಿಂದ ನೀರಿನ ಹೊರಹರಿವು ಹೆಚ್ಚಳ: ನದಿ ಪಾತ್ರದ ಜನರಿಗೆ ಎಚ್ಚರಿಕೆ ಯಾದಗಿರಿ, ಆ.3: ಯಾದಗಿರಿ ಬ್ಯಾರೇಜ್‌ಗೆ ಒಳಹರಿವು ಗಣನೀಯವಾಗಿ ಹೆಚ್ಚಾದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಬ್ಯಾರೇಜ್‌ನ ಒಟ್ಟು 20 ಗೇಟ್‌ಗಳ ಮೂಲಕ ನೀರನ್ನು ಹೊರಹರಿಸಲಾಗುತ್ತಿದೆ. ಈ ಹಿಂದೆ ಸುಮಾರು 80 ಸಾವಿರ ಕ್ಯೂಸೆಕ್ ಪ್ರಮಾಣದಲ್ಲಿ ನೀರನ್ನು ಹೊರಬಿಡಲಾಗುತ್ತಿದ್ದು, ಇದೀಗ ಅದನ್ನು ಒಂದು ಲಕ್ಷ ಕ್ಯೂಸೆಕ್‌ಗೆ ಹೆಚ್ಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನದಿಯಲ್ಲಿ ನೀರಿನ ಹರಿವು ತೀವ್ರವಾಗಿ ಹೆಚ್ಚಿರುವುದರಿಂದ ರೈತರು, ಸಾರ್ವಜನಿಕರು ಹಾಗೂ ನದಿ ಪಾತ್ರದ ಗ್ರಾಮಗಳ ನಿವಾಸಿಗಳು ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು ಎಂದು ಜಿಲ್ಲಾ ಆಡಳಿತ ಹಾಗೂ ಸಂಬಂಧಿತ ಅಧಿಕಾರಿಗಳು ಮನವಿ ಮಾಡಿದ್ದಾರೆ. ಯಾರೂ ಸಹ ನದಿಗೆ ಇಳಿಯುವುದು, ಸೇತುವೆಗಳ ಮೇಲೆ ಅನಗತ್ಯವಾಗಿ ನಿಲ್ಲುವುದು ಅಥವಾ ನದಿ ತೀರದಲ್ಲಿ ಸಂಚರಿಸುವುದನ್ನು ತಪ್ಪಿಸಿ, ಮಕ್ಕಳನ್ನು ನದಿ ಸಮೀಪಕ್ಕೆ ಬಿಡದಂತೆ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ. ನದಿ ಪಾತ್ರದ ಜನರು ಅಧಿಕಾರಿಗಳ ಸೂಚನೆಗಳನ್ನು ಪಾಲಿಸಿ ಸುರಕ್ಷಿತವಾಗಿರಬೇಕು ಎಂದು ಮನವಿ ಮಾಡಲಾಗಿದೆ. #BIGBREAKINGNEWS #ಯಾದಗಿರಿ #ಗುರುಶಿಣಗಿಬ್ಯಾರೇಜ್ #ಯಾದಗಿರಿಬ್ಯಾರೇಜ್ #ನೀರುಬಿಡುಗಡೆ #ಒಂದುಲಕ್ಷಕ್ಯೂಸೆಕ್ #ಭೀಮಾನದಿ #ನೆರೆಎಚ್ಚರಿಕೆ #FloodAlert #WaterRelease #YadgirNews #KarnatakaNews #RiverAlert #PublicSafety #BreakingNews #YadgirBreakingNews #YadgirHeadlines #KannadaNews #StaySafe #MonsoonUpdates

Yadgir, Yadgir | Aug 4, 2026

ಮಳೆಗಾಲದ ಸ್ಪರ್ಶ: ಕಣ್ಣುಮನ ಸೆಳೆಯುತ್ತಿರುವ ನಿಸರ್ಗದ ಹಸಿರು ಸೌಂದರ್ಯ

​ವಿಶೇಷ ವರದಿ:

ಇತ್ತೀಚೆಗೆ ಸುರಿದ ಸಾಲು ಸಾಲು ಮಳೆಯಿಂದಾಗಿ ಸುತ್ತಮುತ್ತಲಿನ ಗುಡ್ಡ-ಬೆಟ್ಟಗಳು ಮೈತುಂಬಾ ಹಸಿರನ್ನು ಹೊದ್ದು ಕಂಗೊಳಿಸುತ್ತಿವೆ. ದಿನನಿತ್ಯದ ಜಂಜಾಟದಿಂದ ಕೊಂಚ ಬಿಡುವು ಮಾಡಿಕೊಂಡು ಪ್ರಯಾಣಿಸುವ ಸಾರ್ವಜನಿಕರಿಗೆ ಹಾಗೂ ಪ್ರಕೃತಿ ಪ್ರಿಯರಿಗೆ ಈ ದೃಶ್ಯಾವಳಿಗಳು ಅತೀವ ಆನಂದ ನೀಡುತ್ತಿವೆ.

​ಮಳೆಯ ತಂಪಾದ ವಾತಾವರಣದಿಂದಾಗಿ ಒಣಗಿದ್ದ ಗಿಡ-ಮರಗಳೆಲ್ಲವೂ ಚಿಗುರೊಡೆದು ಇಡೀ ಪರಿಸರವೇ ಹಸಿರುಮಯವಾಗಿದೆ. ಆಕಾಶದಲ್ಲಿ ಕವಿದಿರುವ ತಂಪಾದ ಮೋಡಗಳು, ಸಾಲು ಸಾಲು ಬೆಟ್ಟಗಳು, ಬಂಡೆಕಲ್ಲುಗಳ ನಡುವೆ ನಗುತಿರುವ ಹಸಿರು ಹೊಲಗಳು ಪ್ರಕೃತಿಯ ಸೌಂದರ್ಯವನ್ನು ಇಮ್ಮಡಿಗೊಳಿಸಿವೆ.
​
​ಕಣ್ಣುಮನ ಸೆಳೆಯುವ ಹಸಿರು: ಮಳೆಯ ಆಗಮನದಿಂದ ಗುಡ್ಡಗಾಡು ಪ್ರದೇಶಗಳು ನವಚೈತನ್ಯ ಪಡೆದುಕೊಂಡಿದ್ದು, ಪ್ರಕೃತಿಯ ಮಡಿಲು ಸೌಂದರ್ಯದ ಗನಿಯಾಗಿದೆ.
​ಆಹ್ಲಾದಕರ ವಾತಾವರಣ: ಮೋಡಕವಿದ ಆಕಾಶ ಮತ್ತು ತಂಪಾದ ಗಾಳಿ ಸುತ್ತಮುತ್ತಲಿನ ಪರಿಸರಕ್ಕೆ ಶಾಂತಮಯ ಕಳೆಯನ್ನು ತಂದಿತ್ತಿದೆ.
​ಪ್ರಯಾಣಿಕರಿಗೆ ಮುದ: ಈ ಮಾರ್ಗವಾಗಿ ಸಂಚರಿಸುವ ವಾಹನ ಸವಾರರು ಹಾಗೂ ಸಾರ್ವಜನಿಕರು ಪ್ರಕೃತಿಯ ಈ ಸೌಂದರ್ಯವನ್ನು ಕಣ್ಣುಂಬಿಕೊಂಡು ಆನಂದಿಸುತ್ತಿದ್ದಾರೆ.

ಮಳೆಗಾಲದ ಸ್ಪರ್ಶ: ಕಣ್ಣುಮನ ಸೆಳೆಯುತ್ತಿರುವ ನಿಸರ್ಗದ ಹಸಿರು ಸೌಂದರ್ಯ ​ವಿಶೇಷ ವರದಿ: ಇತ್ತೀಚೆಗೆ ಸುರಿದ ಸಾಲು ಸಾಲು ಮಳೆಯಿಂದಾಗಿ ಸುತ್ತಮುತ್ತಲಿನ ಗುಡ್ಡ-ಬೆಟ್ಟಗಳು ಮೈತುಂಬಾ ಹಸಿರನ್ನು ಹೊದ್ದು ಕಂಗೊಳಿಸುತ್ತಿವೆ. ದಿನನಿತ್ಯದ ಜಂಜಾಟದಿಂದ ಕೊಂಚ ಬಿಡುವು ಮಾಡಿಕೊಂಡು ಪ್ರಯಾಣಿಸುವ ಸಾರ್ವಜನಿಕರಿಗೆ ಹಾಗೂ ಪ್ರಕೃತಿ ಪ್ರಿಯರಿಗೆ ಈ ದೃಶ್ಯಾವಳಿಗಳು ಅತೀವ ಆನಂದ ನೀಡುತ್ತಿವೆ. ​ಮಳೆಯ ತಂಪಾದ ವಾತಾವರಣದಿಂದಾಗಿ ಒಣಗಿದ್ದ ಗಿಡ-ಮರಗಳೆಲ್ಲವೂ ಚಿಗುರೊಡೆದು ಇಡೀ ಪರಿಸರವೇ ಹಸಿರುಮಯವಾಗಿದೆ. ಆಕಾಶದಲ್ಲಿ ಕವಿದಿರುವ ತಂಪಾದ ಮೋಡಗಳು, ಸಾಲು ಸಾಲು ಬೆಟ್ಟಗಳು, ಬಂಡೆಕಲ್ಲುಗಳ ನಡುವೆ ನಗುತಿರುವ ಹಸಿರು ಹೊಲಗಳು ಪ್ರಕೃತಿಯ ಸೌಂದರ್ಯವನ್ನು ಇಮ್ಮಡಿಗೊಳಿಸಿವೆ. ​ ​ಕಣ್ಣುಮನ ಸೆಳೆಯುವ ಹಸಿರು: ಮಳೆಯ ಆಗಮನದಿಂದ ಗುಡ್ಡಗಾಡು ಪ್ರದೇಶಗಳು ನವಚೈತನ್ಯ ಪಡೆದುಕೊಂಡಿದ್ದು, ಪ್ರಕೃತಿಯ ಮಡಿಲು ಸೌಂದರ್ಯದ ಗನಿಯಾಗಿದೆ. ​ಆಹ್ಲಾದಕರ ವಾತಾವರಣ: ಮೋಡಕವಿದ ಆಕಾಶ ಮತ್ತು ತಂಪಾದ ಗಾಳಿ ಸುತ್ತಮುತ್ತಲಿನ ಪರಿಸರಕ್ಕೆ ಶಾಂತಮಯ ಕಳೆಯನ್ನು ತಂದಿತ್ತಿದೆ. ​ಪ್ರಯಾಣಿಕರಿಗೆ ಮುದ: ಈ ಮಾರ್ಗವಾಗಿ ಸಂಚರಿಸುವ ವಾಹನ ಸವಾರರು ಹಾಗೂ ಸಾರ್ವಜನಿಕರು ಪ್ರಕೃತಿಯ ಈ ಸೌಂದರ್ಯವನ್ನು ಕಣ್ಣುಂಬಿಕೊಂಡು ಆನಂದಿಸುತ್ತಿದ್ದಾರೆ.

Yadgir, Yadgir | Aug 3, 2026

ಬಿ.ಜೆಡ್. ಜಮೀರ್ ಅಹ್ಮದ್ ಖಾನ್ ಕರ್ನಾಟಕ ಸಚಿವ ಸಂಪುಟ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.

ಬೆಂಗಳೂರು: ಚಾಮರಾಜಪೇಟೆ ಶಾಸಕ ಬಿ.ಜೆಡ್. ಜಮೀರ್ ಅಹ್ಮದ್ ಖಾನ್ ಅವರು ಕರ್ನಾಟಕ ಸರ್ಕಾರದ ನೂತನ ಸಚಿವರಾಗಿ ಇಂದು ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ಪ್ರಮಾಣವಚನ ಸ್ವೀಕರಿಸಿದರು. ರಾಜ್ಯ ಸಚಿವ ಸಂಪುಟ ವಿಸ್ತರಣೆಯ ಭಾಗವಾಗಿ ಅವರು ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರದಲ್ಲಿ ಸ್ಥಾನ ಪಡೆದಿದ್ದಾರೆ.

#BZZameerAhmedKhan #ಕರ್ನಾಟಕ #ಸಚಿವಸಂಪುಟ #ಮಂತ್ರಿ #YadgirHeadlines

ಬಿ.ಜೆಡ್. ಜಮೀರ್ ಅಹ್ಮದ್ ಖಾನ್ ಕರ್ನಾಟಕ ಸಚಿವ ಸಂಪುಟ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ಬೆಂಗಳೂರು: ಚಾಮರಾಜಪೇಟೆ ಶಾಸಕ ಬಿ.ಜೆಡ್. ಜಮೀರ್ ಅಹ್ಮದ್ ಖಾನ್ ಅವರು ಕರ್ನಾಟಕ ಸರ್ಕಾರದ ನೂತನ ಸಚಿವರಾಗಿ ಇಂದು ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ಪ್ರಮಾಣವಚನ ಸ್ವೀಕರಿಸಿದರು. ರಾಜ್ಯ ಸಚಿವ ಸಂಪುಟ ವಿಸ್ತರಣೆಯ ಭಾಗವಾಗಿ ಅವರು ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರದಲ್ಲಿ ಸ್ಥಾನ ಪಡೆದಿದ್ದಾರೆ. #BZZameerAhmedKhan #ಕರ್ನಾಟಕ #ಸಚಿವಸಂಪುಟ #ಮಂತ್ರಿ #YadgirHeadlines

Yadgir, Yadgir | Aug 3, 2026

ಯಾದಗಿರಿಯಲ್ಲಿ ಭೂ-ಒಡೆತನ ಯೋಜನೆ ಜಾರಿಗೊಳಿಸಲು ಆಗ್ರಹ: ರೈತರ ಬೆಳೆಸಾಲ ಮನ್ನಾ ಸೇರಿ ವಿವಿಧ ಬೇಡಿಕೆಗಳ ಮನವಿ
ಯಾದಗಿರಿ, ಆ.3: ಸಮತಾ ಸೈನಿಕ ದಳ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ನೂರಾರು ಮಹಿಳೆಯರು ಹಾಗೂ ಮುಖಂಡರು ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿ, ಭೂ-ಒಡೆತನ ಯೋಜನೆಯನ್ನು ತ್ವರಿತವಾಗಿ ಜಾರಿಗೊಳಿಸುವಂತೆ ಹಾಗೂ ಯಾದಗಿರಿ ಜಿಲ್ಲೆಯನ್ನು ಬರಪೀಡಿತ ಜಿಲ್ಲೆ ಎಂದು ಘೋಷಿಸಿ ರೈತರ ಬೆಳೆಸಾಲ ಮನ್ನಾ ಮಾಡುವಂತೆ ಒತ್ತಾಯಿಸಿದರು.
ಸಮಿತಿಯ ಮುಖಂಡರು ಮಾತನಾಡಿ, ಜಿಲ್ಲೆಯ ಅನೇಕ ದಲಿತ ಕುಟುಂಬಗಳು ಹಲವು ವರ್ಷಗಳಿಂದ ಕೃಷಿ ಭೂಮಿ ಹಾಗೂ ವಸತಿ ನಿವೇಶನವಿಲ್ಲದೆ ಸಂಕಷ್ಟದಲ್ಲಿದ್ದು, 2019–20ರಲ್ಲಿ ಭೂ-ಒಡೆತನ ಯೋಜನೆಯಡಿ ಭೂಮಿ ಹಂಚಿಕೆ ಪ್ರಕ್ರಿಯೆ ಆರಂಭವಾದರೂ, ಐದು ವರ್ಷ ಕಳೆದರೂ ಯೋಜನೆ ಪೂರ್ಣಗೊಂಡಿಲ್ಲ ಎಂದು ಆರೋಪಿಸಿದರು. ಭೂ ಮಾಲೀಕರು ಭೂಮಿ ನೀಡಲು ಒಪ್ಪಿಗೆ ನೀಡಿದ್ದರೂ, ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಹೊಸ ಸಮಿತಿ ರಚಿಸದ ಕಾರಣ ಯೋಜನೆ ಸ್ಥಗಿತಗೊಂಡಿದೆ ಎಂದು ದೂರಿದರು.
ಭೂ ಮಾಲೀಕರಿಗೆ ಸರ್ಕಾರ ನಿಗದಿತ ದರದಲ್ಲಿ ಪರಿಹಾರ ನೀಡಿ, ಅರ್ಹ ದಲಿತ ಕುಟುಂಬಗಳಿಗೆ ಭೂಮಿ ಹಂಚಿಕೆ ಮಾಡಬೇಕು ಎಂದು ಒತ್ತಾಯಿಸಿದ ಪ್ರತಿಭಟನಾಕಾರರು, ಹತ್ತಿಗೂಡೂರು, ಐಕೂರು, ಮಾಲಹಳ್ಳಿ, ನಾಯ್ಕಲ್, ಚಟ್ನಳ್ಳಿ, ಬಲಕಲ್, ಮರಮಕಲ್, ದೋರನಹಳ್ಳಿ, ಇಂಗಳಗಿ, ಬಸವಂತಪುರ, ಹೈಯ್ಯಾಳ (ಬಿ), ಇಟ್ಟಿಗಿ, ಶಿರವಾಳ, ಕೊಂಗಂಡಿ, ಯಕ್ಷಿತಿ, ಬೊಮ್ಮನಹಳ್ಳಿ, ಅನವರ್, ಕೊಳ್ಳೂರು, ತುಮಕೂರು, ಕಾಡೆಮೆಗೆರ ಸೇರಿದಂತೆ ವಿವಿಧ ಗ್ರಾಮಗಳ ಫಲಾನುಭವಿಗಳನ್ನು ಯೋಜನೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.
ಇದೇ ವೇಳೆ, ಯಾದಗಿರಿ ಜಿಲ್ಲೆಯನ್ನು ಬರಪೀಡಿತ ಜಿಲ್ಲೆ ಎಂದು ಘೋಷಿಸಿ ರೈತರ ರಾಷ್ಟ್ರೀಕೃತ ಬ್ಯಾಂಕ್‌ಗಳ ಬೆಳೆಸಾಲವನ್ನು ಮನ್ನಾ ಮಾಡಬೇಕು ಹಾಗೂ ಬರದಿಂದ ನಷ್ಟ ಅನುಭವಿಸಿರುವ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ಅಲ್ಲದೆ, ಜಿಲ್ಲೆಯ ಎಲ್ಲಾ ಅರ್ಹ ದಲಿತ ಕುಟುಂಬಗಳಿಗೆ ಮನೆಗಳ ಮಂಜೂರಾತಿ ನೀಡುವಂತೆ ಸರ್ಕಾರವನ್ನು ಕೋರಲಾಗಿದೆ.
ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ಸಮತಾ ಸೈನಿಕ ದಳದ ನೇತೃತ್ವದಲ್ಲಿ ಉಪವಾಸ ಸತ್ಯಾಗ್ರಹ, ಪ್ರತಿಭಟನೆ ಹಾಗೂ ಜನಪ್ರತಿನಿಧಿಗಳ ನಿವಾಸಗಳ ಎದುರು ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ಹತ್ತಿಗುಡೂರ ಶರಣರಡ್ಡಿ, ಜಿಲ್ಲಾ ಗೌರವಾಧ್ಯಕ್ಷ ಶರಣಪ್ಪ ಕಡಿಮನಿ ಅನಕಸೂಗೂರು, ತಾಲೂಕು ಅಧ್ಯಕ್ಷ ಶರಣಪ್ಪ ಚಲುವಾದಿ, ತಾಲೂಕು ಮುಖಂಡ ಭೀಮರಾಯ ದೋರನಹಳ್ಳಿ ಸೇರಿದಂತೆ ಸಮತಾ ಸೈನಿಕ ದಳದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ಯಾದಗಿರಿಯಲ್ಲಿ ಭೂ-ಒಡೆತನ ಯೋಜನೆ ಜಾರಿಗೊಳಿಸಲು ಆಗ್ರಹ: ರೈತರ ಬೆಳೆಸಾಲ ಮನ್ನಾ ಸೇರಿ ವಿವಿಧ ಬೇಡಿಕೆಗಳ ಮನವಿ ಯಾದಗಿರಿ, ಆ.3: ಸಮತಾ ಸೈನಿಕ ದಳ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ನೂರಾರು ಮಹಿಳೆಯರು ಹಾಗೂ ಮುಖಂಡರು ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿ, ಭೂ-ಒಡೆತನ ಯೋಜನೆಯನ್ನು ತ್ವರಿತವಾಗಿ ಜಾರಿಗೊಳಿಸುವಂತೆ ಹಾಗೂ ಯಾದಗಿರಿ ಜಿಲ್ಲೆಯನ್ನು ಬರಪೀಡಿತ ಜಿಲ್ಲೆ ಎಂದು ಘೋಷಿಸಿ ರೈತರ ಬೆಳೆಸಾಲ ಮನ್ನಾ ಮಾಡುವಂತೆ ಒತ್ತಾಯಿಸಿದರು. ಸಮಿತಿಯ ಮುಖಂಡರು ಮಾತನಾಡಿ, ಜಿಲ್ಲೆಯ ಅನೇಕ ದಲಿತ ಕುಟುಂಬಗಳು ಹಲವು ವರ್ಷಗಳಿಂದ ಕೃಷಿ ಭೂಮಿ ಹಾಗೂ ವಸತಿ ನಿವೇಶನವಿಲ್ಲದೆ ಸಂಕಷ್ಟದಲ್ಲಿದ್ದು, 2019–20ರಲ್ಲಿ ಭೂ-ಒಡೆತನ ಯೋಜನೆಯಡಿ ಭೂಮಿ ಹಂಚಿಕೆ ಪ್ರಕ್ರಿಯೆ ಆರಂಭವಾದರೂ, ಐದು ವರ್ಷ ಕಳೆದರೂ ಯೋಜನೆ ಪೂರ್ಣಗೊಂಡಿಲ್ಲ ಎಂದು ಆರೋಪಿಸಿದರು. ಭೂ ಮಾಲೀಕರು ಭೂಮಿ ನೀಡಲು ಒಪ್ಪಿಗೆ ನೀಡಿದ್ದರೂ, ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಹೊಸ ಸಮಿತಿ ರಚಿಸದ ಕಾರಣ ಯೋಜನೆ ಸ್ಥಗಿತಗೊಂಡಿದೆ ಎಂದು ದೂರಿದರು. ಭೂ ಮಾಲೀಕರಿಗೆ ಸರ್ಕಾರ ನಿಗದಿತ ದರದಲ್ಲಿ ಪರಿಹಾರ ನೀಡಿ, ಅರ್ಹ ದಲಿತ ಕುಟುಂಬಗಳಿಗೆ ಭೂಮಿ ಹಂಚಿಕೆ ಮಾಡಬೇಕು ಎಂದು ಒತ್ತಾಯಿಸಿದ ಪ್ರತಿಭಟನಾಕಾರರು, ಹತ್ತಿಗೂಡೂರು, ಐಕೂರು, ಮಾಲಹಳ್ಳಿ, ನಾಯ್ಕಲ್, ಚಟ್ನಳ್ಳಿ, ಬಲಕಲ್, ಮರಮಕಲ್, ದೋರನಹಳ್ಳಿ, ಇಂಗಳಗಿ, ಬಸವಂತಪುರ, ಹೈಯ್ಯಾಳ (ಬಿ), ಇಟ್ಟಿಗಿ, ಶಿರವಾಳ, ಕೊಂಗಂಡಿ, ಯಕ್ಷಿತಿ, ಬೊಮ್ಮನಹಳ್ಳಿ, ಅನವರ್, ಕೊಳ್ಳೂರು, ತುಮಕೂರು, ಕಾಡೆಮೆಗೆರ ಸೇರಿದಂತೆ ವಿವಿಧ ಗ್ರಾಮಗಳ ಫಲಾನುಭವಿಗಳನ್ನು ಯೋಜನೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು. ಇದೇ ವೇಳೆ, ಯಾದಗಿರಿ ಜಿಲ್ಲೆಯನ್ನು ಬರಪೀಡಿತ ಜಿಲ್ಲೆ ಎಂದು ಘೋಷಿಸಿ ರೈತರ ರಾಷ್ಟ್ರೀಕೃತ ಬ್ಯಾಂಕ್‌ಗಳ ಬೆಳೆಸಾಲವನ್ನು ಮನ್ನಾ ಮಾಡಬೇಕು ಹಾಗೂ ಬರದಿಂದ ನಷ್ಟ ಅನುಭವಿಸಿರುವ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ಅಲ್ಲದೆ, ಜಿಲ್ಲೆಯ ಎಲ್ಲಾ ಅರ್ಹ ದಲಿತ ಕುಟುಂಬಗಳಿಗೆ ಮನೆಗಳ ಮಂಜೂರಾತಿ ನೀಡುವಂತೆ ಸರ್ಕಾರವನ್ನು ಕೋರಲಾಗಿದೆ. ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ಸಮತಾ ಸೈನಿಕ ದಳದ ನೇತೃತ್ವದಲ್ಲಿ ಉಪವಾಸ ಸತ್ಯಾಗ್ರಹ, ಪ್ರತಿಭಟನೆ ಹಾಗೂ ಜನಪ್ರತಿನಿಧಿಗಳ ನಿವಾಸಗಳ ಎದುರು ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ಹತ್ತಿಗುಡೂರ ಶರಣರಡ್ಡಿ, ಜಿಲ್ಲಾ ಗೌರವಾಧ್ಯಕ್ಷ ಶರಣಪ್ಪ ಕಡಿಮನಿ ಅನಕಸೂಗೂರು, ತಾಲೂಕು ಅಧ್ಯಕ್ಷ ಶರಣಪ್ಪ ಚಲುವಾದಿ, ತಾಲೂಕು ಮುಖಂಡ ಭೀಮರಾಯ ದೋರನಹಳ್ಳಿ ಸೇರಿದಂತೆ ಸಮತಾ ಸೈನಿಕ ದಳದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Yadgir, Yadgir | Aug 3, 2026