ಬಳ್ಳಾರಿ: ಕುಡತಿನಿ ರೈಲ್ವೆ ಮೇಲ್ಸೇತುವೆ ಅಕ್ಟೋಬರ್ 25ರವರೆಗೆ ಬಂದ್: ಪರ್ಯಾಯ ಮಾರ್ಗದ ಮಾಹಿತಿ ಇಲ್ಲಿದೆ
ಕುಡತಿನಿ ರೈಲ್ವೆ ಮೇಲ್ಸೇತುವೆ (ROB 102) ದುರಸ್ತಿ ಕಾರ್ಯ ನಡೆಯುತ್ತಿರುವುದರಿಂದ ಅಕ್ಟೋಬರ್ 25ರವರೆಗೆ ವಾಹನ ಸಂಚಾರ ನಿಷೇಧಿಸಲಾಗಿದೆ. ಸವಾರರು ಸಿದ್ಧಮ್ಮನಹಳ್ಳಿ (SH-132) ಹಾಗೂ ರೈಲ್ವೆ ಗೇಟ್ ಸಂಖ್ಯೆ 100 (ಏಳುಬೆಂಚಿ ರಸ್ತೆ) ಮೂಲಕ ಪರ್ಯಾಯವಾಗಿ ಸಂಚರಿಸಲು ಸೂಚಿಸಲಾಗಿದೆ.