"ಕನ್ನಡ ಮಾತೃಭಾಷೆಯಾದರೆ, ತುಳು ಅವಳ ಮಗಳು"
ತುಳುನಾಡ ಜವನೆರ್ ಬೆಂಗಳೂರು (ರಿ.) ವತಿಯಿಂದ ವಿಜಯನಗರದ ಬಂಟರ ಭವನದಲ್ಲಿ ಆಯೋಜಿಸಲಾಗಿದ್ದ ಅಸ್ಟೆಮಿದ ಐಸಿರ ಕಾರ್ಯಕ್ರಮದಲ್ಲಿ ಸನ್ಮಾನ್ಯ ಮುಖ್ಯಮಂತ್ರಿ ಶ್ರೀ DK Shivakumar ಅವರು ಭಾಗವಹಿಸಿ ಮಾತನಾಡಿದರು.
ಕರಾವಳಿ ಭಾಗದ ಸಮಗ್ರ ಕಲ್ಯಾಣ ಹಾಗೂ ಆ ಭಾಗದಲ್ಲಿ ಪ್ರವಾಸೋದ್ಯಮದ ಅಭಿವೃದ್ಧಿಗೆ ನಮ್ಮ ಸರ್ಕಾರ ವಿಶೇಷ ಆದ್ಯತೆ ನೀಡಲಿದೆ. ಕರಾವಳಿಯ ಅಭಿವೃದ್ಧಿಗಾಗಿ ನಮ್ಮ ಶ್ರಮ ನಿರಂತರವಾಗಿರಲಿದೆ.
"ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ" ಎನ್ನುವ ಮಾತಿನಂತೆ, ಯಾವುದೇ ಟೀಕೆಗಳಿಗೆ ಕಿವಿಗೊಡದೆ, ಕೇವಲ ಜನಪರ ಹಾಗೂ ನಾಡಿನ ಅಭಿವೃದ್ಧಿ ಕೆಲಸಗಳತ್ತ ಮಾತ್ರ ನಮ್ಮ ಗಮನ ಹರಿಸಲಿದ್ದೇವೆ.
ಈ ಸಂದರ್ಭದಲ್ಲಿ ಸಚಿವರು, ಶಾಸಕರು, ಸಂಸದರು, ಜನಪ್ರತಿನಿಧಿಗಳು, ಚಲನಚಿತ್ರ ನಟರು, ಉದ್ಯಮಿಗಳು, ವಿವಿಧ ಗಣ್ಯರು ಉಪಸ್ಥಿತರಿದ್ದರು.
Yadgir, Yadgir | Sep 27, 2026