ಮಾಲೂರು: ಉಪಮುಖ್ಯಮಂತ್ರಿಯನ್ನು ಭೇಟಿಯಾದ ಕೋಲಾರ ಶಾಸಕರು
Malur, Kolar | Nov 28, 2025 ಬೆಂಗಳೂರಿನ ಸದಾಶಿವ ನಗರದಲ್ಲಿರುವ ಉಪಮುಖ್ಯಮಂತ್ರಿಯ ಡಿಕೆ ಶಿವಕುಮಾರ್ ನಿವಾಸಕ್ಕೆ ಕೋಲಾರ ಜಿಲ್ಲೆಯ ಪ್ರಮುಖ ನಾಯಕರು ಶುಕ್ರವಾರ ಭೇಟಿ ನೀಡಿದರು ಮಾಲೂರು ಶಾಸಕ ಕೆ ವೈ ನಂಜೇಗೌಡ ಕೋಲಾರ ಶಾಸಕ ಕೊತ್ತುರು ಮಂಜುನಾಥ್ ಮುಳಬಾಗಿಲು ಕಾಂಗ್ರೆಸ್ ಮುಖಂಡ ಆದಿನಾರಾಯಣ ಕುಣಿಗಲ್ ಶಾಸಕ ಡಾಕ್ಟರ್ ರಂಗನಾಥ್ ಪ್ರೊ. ಎಂ ವಿ ರಾಜೇಗೌಡ ಸೇರಿದಂತೆ ಅನೇಕರು ಡಿಕೆ ಶಿವಕುಮಾರ್ ಅಣ್ಣ ಭೇಟಿ ಮಾಡಿ ರಾಜಕೀಯ ವಿದ್ಯಮಾನಗಳ ಕುರಿತು ಸಮಾಲೋಚನೆ ನಡೆಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.