ಬೆಳಗಾವಿ: ಬಾವಿ ಕೊಳ್ಳ ಅಮೃತ ಸರೋವರದ ದಡದಲ್ಲಿ ಸ್ವಚ್ಛತಾ ಅಭಿಯಾನ
ಬೆಳಗಾವಿ ಜಿಲ್ಲೆಯ ಬಂಬರಗಾ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ಬಾವಿ ಕೊಳ್ಳ ಅಮೃತ ಸರೋವರದ ದಡದಲ್ಲಿ ಸ್ವಚ್ಛತಾ ಅಭಿಯಾನ ನಡೆಸಲಾಯಿತು. ಜಿಲ್ಲಾ ಪಂಚಾಯತ್ ಸಿಇಓ ರಾಹುಲ್ ಶಿಂಧೆ ಅವರ ಸೂಚನೆಯಂತೆ, ಪಿಡಿಓ ನೇತೃತ್ವದಲ್ಲಿ ಅಧಿಕಾರಿಗಳು ನೀರನ್ನು ಉಳಿಸಿ ಎಂಬ ಜಾಗೃತಿಯೊಂದಿಗೆ ಸ್ವಚ್ಛತಾ ಕಾರ್ಯ ಕೈಗೊಂಡರು.