ನೆಲಮಂಗಲ: ಮೋಟಗಾನಹಳ್ಲಿಯಲ್ಲಿ ಶರನ್ನವರಾತ್ರಿ ಹಿನ್ನೆಲೆ ವಿಶೇಷ ಪೂಜೆ ಭಕ್ತಾಧಿಗಳಿಗೆ ಅನ್ನ ಸಂತರ್ಪಣೆ
ನೆಲಮಂಗಲ ನಾಡಿನೆಲ್ಲೆಡೆ ಸಂಭ್ರಮದ ವಿಜಯದಶಮಿ ಆಚರಣೆ ನಡೆಯುತ್ತಿದೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಮೋಟಗಾನಹಳ್ಳಿಯ ಗ್ರಾಮ ದೇವತೆ ಗಂಗಮ್ಮ ದೇವಾಲಯದಲ್ಲಿ ಶರನ್ನವರಾತ್ರಿ ಅಂಗವಾಗಿ, ಅಭಿಷೇಕ, ಸಾವಿರಾರು ಜನರಿಗೆ ಅನ್ನದಾಸೋಹ ಏರ್ಪಡಿಸಿದ್ದರು, ದೇವಾಲಯ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಆರ್.ಸುರೇಶ್ ಮತ್ತು ಆರ್.ರಮೇಶ್ ಸೇರಿ, ಬನ್ನಿ ಮರ, ಬಾಳೆ ಮರ ಕಡಿತ, ಭಕ್ತರಿಗೆ ಶಮಿ ಪತ್ರೆ ಹಂಚಿದ್ದಾರೆ, ಇದೇ ವೇಳೆಯಲ್ಲಿ ಸ್ಥಳೀಯ ಗ್ರಾ.ಪಂ.ಅಧ್ಯಕ್ಷ ಶಿವಕುಮಾರ್, ಉಪಾಧ್ಯಕ್ಷೆ ವಂದನಾ ಮಹೇಶ್ ಹಾಜರಿದ್ದು, ಧಾರ್ಮಿಕ ಕಾರ್ಯಕ್ರಮದ ಮುಂಚೂಣಿಯಲ್ಲಿದ್ದರು.