ಚಿಕ್ಕಮಗಳೂರು: ಎರಡೂವರೆ ವರ್ಷದಲ್ಲಿ ನಗರಸಭೆ ಅಧ್ಯಕ್ಷನಾಗಿ ಮಾಡಿರುವ ಕೆಲಸ ತೃಪ್ತಿ ತಂದಿದೆ: ನಗರದಲ್ಲಿ ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್
ಕಳೆದ ಎರಡೂವರೆ ವರ್ಷದ ಅವಯಲ್ಲಿ ಅಧ್ಯಕ್ಷನಾಗಿದ್ದರೂ ಸಾರ್ವಜನಿಕ ಸೇವಕನಾಗಿ ಕೆಲಸ ಮಾಡಿದ್ದೇನೆ. ದಕ್ಷ ಆಡಳಿತ ನೀಡಿರುವುದು ತೃಪ್ತಿ ತಂದಿದೆ ಎಂದು ನಗರಸಭೆ ಅಧ್ಯಕ್ಷ ವರಸಿದ್ದಿವೇಣುಗೋಪಾಲ್ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನನ್ನ ಆಡಳಿತ ಅವಧಿಯಲ್ಲಿ ಎಲ್ಲ ವಾರ್ಡ್‍ಗಳಲ್ಲೂ ಸಾಮೂಹಿಕ ಸ್ವಚ್ಛತೆ ಕಾರ್ಯ ಕೈಗೊಂಡಿದ್ದೇನೆ. ಇದು ಇತರರಿಗೂ ಮಾದರಿಯಾಗಿದೆ. ಕಂದಾಯ ವಸೂಲಿಗೆ ಡಿಜಿಟಲ್ ವ್ಯವಸ್ಥೆ ಮಾಡಿದ್ದು, ವೈರ್‍ಲೆಸ್ ಪ್ರಿಂಟರ್ ಮೂಲಕ ಮನೆಮನೆಗೆ ತೆರಳಿ ಯುಪಿಐ ಪೇಮೆಂಟ್ ಮಾಡಿಸಲಾಗುತ್ತಿದೆ. ಇದರಿಂದ ಕಂದಾಯ ಕಟ್ಟಿದವರಿಗೂ ಮೋಸ ಆಗುವ ಸಾಧ್ಯತೆ ಇಲ್ಲ ಎಂದರು.