72ನೇ ವನ್ಯಜೀವಿ ಸಪ್ತಾಹ ಕಾರ್ಯಕ್ರಮದ ಜಾಗೃತಿ ಜಾಥಾಗೆ ಚಾಲನೆ
==================
ಯಾದಗಿರಿ, ಅಕ್ಟೋಬರ್.7 : ನಗರದ ಕೆಎಂಎA ಪದವಿಪೂರ್ವ ಕಾಲೇಜು ಹಾಗೂ ಪ್ರಾದೇಶಿಕ ಅರಣ್ಯ ಇಲಾಖೆ ಯಾದಗಿರಿ ಇವರ ಜಂಟಿ ಸಹಯೋಗದಲ್ಲಿ 72ನೇ ವನ್ಯಜೀವಿ ಸಪ್ತಾಹ-2026 ಕಾರ್ಯಕ್ರಮವನ್ನು ಇತ್ತೀಚಿಗೆ ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮದ ಆರಂಭವಾಗಿ ಸಾರ್ವಜನಿಕರಲ್ಲಿ ವನ್ಯಜೀವಿಗಳ ಕುರಿತು ಜಾಗೃತಿ ಮೂಡಿಸಲು ಬೃಹತ್ ಜಾಥಾವನ್ನು ಹಮ್ಮಿಕೊಳ್ಳಲಾಗಿತ್ತು. ಹಿರಿಯ ನ್ಯಾಯಾಧೀಶರಾದ ಶ್ರೀ ಮರಿಯಪ್ಪ ಅವರು ಜಾಥಾಗೆ ಚಾಲನೆ ನೀಡಿದರು. ಈ ಜಾಥಾವು ಕೆಎಂಎA ಪದವಿ ಪೂರ್ವ ಕಾಲೇಜಿನಿಂದ ಪ್ರಾರಂಭವಾಗಿ ಸುಭಾಷ್ ವೃತ್ತದ ಮುಖಾಂತರ ಹೊಸ ಬಸ್ ನಿಲ್ದಾಣದವರೆಗೆ ಯಶಸ್ವಿಯಾಗಿ ನಡೆಯಿತು.
ಜಾಥಾದ ನಂತರ ಕೆಎಂಎA ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ವನ್ಯಜೀವಿ ಸಪ್ತಾಹದ ಸಭಾ ಕಾರ್ಯಕ್ರಮವನ್ನು ನಡೆಸಲಾಯಿತು. ಈ ಸಂದರ್ಭದಲ್ಲಿ ಪಿಯುಸಿ ವಿದ್ಯಾರ್ಥಿಗಳಿಗೆ ಚಿತ್ರಕಲೆ ಹಾಗೂ ಪ್ರಬಂಧ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ವಿಜೇತರಾದ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ಗಣ್ಯರು ಸಸಿಗೆ ನೀರೆರೆಯುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾದೇಶಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಎ. ಬಿ. ಪಾಟೀಲ್ ವಹಿಸಿ ವನ್ಯಜೀವಿ ಹಾಗೂ ಅರಣ್ಯ ಸಂರಕ್ಷಣೆಯ ಕುರಿತು ಅಧ್ಯಕ್ಷೀಯ ನುಡಿಗಳನ್ನಾಡಿದರು.
ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಮರಿಯಪ್ಪ, ಗೌರವಾನ್ವಿತ ಅತಿಥಿಗಳು ಚೇತನ್ ಗಸ್ತಿ, ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು, ಮಹಮ್ಮದ್ ಅಸದ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು, ಶೈಲೇಂದ್ರ ಕವಡಿ, ಪರಿಸರವಾದಿಗಳು, ರಾಜೀವ್ ಗಾಂಧಿ ಪರಿಸರ ಪ್ರಶಸ್ತಿ ಹಾಗೂ ವೃಕ್ಷ ಮಿತ್ರ ಪ್ರಶಸ್ತಿ ಪುರಸ್ಕೃತರು, ಬೀದರ್.
ಆರ್.ಎಫ್.ಓ. ಬುರನುದ್ದೀನ್ ಹಾಗೂ ಡಿ.ಆರ್.ಎಫ್.ಓ. ಮಂಜುನಾಥ್, ವೆಂಕಟೇಶ್ ಪೂಜಾರಿ, ಕೆಎಂಎA ಆಡಳಿತ ಅಧಿಕಾರಿಗಳು, ರವಿಕಾಂತ್ ಕಸಿಬಿ, ಪ್ರಾಂಶುಪಾಲರು, ನಳಂದ ಪದವಿ ಮಹಾವಿದ್ಯಾಲಯ, ಯಾದಗಿರಿ, ಮಲ್ಲಿಕಾರ್ಜುನ್ ಮುಂಡರಗಿ, ಪ್ರಾಂಶುಪಾಲರು, ಕೆಎಂಎA ಪದವಿ ಪೂರ್ವ ಕಾಲೇಜು, ಯಾದಗಿರಿ ಅವರುಗಳು ವನ್ಯಜೀವಿಗಳು ಮತ್ತು ಪರಿಸರ ಸಂರಕ್ಷಣೆಯ ಅಗತ್ಯತೆಯ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊAಡರು.
ಈ ಕಾರ್ಯಕ್ರಮದಲ್ಲಿ ಉಪ ವಲಯ ಅರಣ್ಯಾಧಿಕಾರಿ ಕಾಶಪ್ಪ, ವನಪಾಲಕರಾದ ಲಿಂಗರಾಜ ಗಸ್ತಿ, ಸಿದ್ದಣ್ಣ ಗಸ್ತಿ, ದೇವರಾಜ ಗಸ್ತಿ, ಚನ್ನಪ್ಪ ಗಸ್ತಿ, ಶ್ರವಣಕುಮಾರ ಗಸ್ತಿ ಹಾಗೂ ಅರಣ್ಯ ವೀಕ್ಷಕರಾದ ಶಿಲ್ಪಾ, ಪ್ರಿಯಾಂಕ ವಡಗೇರಿ ಮತ್ತು ಉಪನ್ಯಾಸಕರು ಸೇರಿದಂತೆ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.
Yadgir, Yadgir | Oct 7, 2026