ಮೊಳಕಾಲ್ಮುರು: ಕಣ್ಣಿನಲ್ಲಿ ಬಿದ್ದ ಧೂಳು,ಹರಳುನ್ನು ಕ್ಷಣಾರ್ಧದಲ್ಲಿ ತೆಗೆದು ನೋವು ನಿವಾರಿಸುವ ಬುಕ್ಕಾಂಬುದಿ ಗ್ರಾಮದ ಮಾಂತ್ರಿಕ
ಚಿತ್ರದುರ್ಗ:-ಕಣ್ಣುಗಳು ನಮ್ಮ ಪ್ರಪಂಚವನ್ನು ನೋಡಲು ಮತ್ತು ಮೆದುಳಿಗೆ ಮಾಹಿತಿ ಕಳುಹಿಸಲು ಅತ್ಯಗತ್ಯವಾದ ದೇಹದ ಸೂಕ್ಷ್ಮ ಭಾಗಗಳಲ್ಲಿ ಒಂದು.ಕಣ್ಣಿನ ಬಗ್ಗೆ ನಾವು ಸಾಧ್ಯವಾದಷ್ಟು ಕಾಳಜಿ ವಹಿಸಬೇಕು.ಕಣ್ಣಿಗೆ ಏನಾದ್ರೂ ಅಪಾಯ ಆದ್ರೆ ಸರಿ ಪಡಿಸೋದು ಒಮೊಮ್ಮೆ ಕಷ್ಟ ಎನಿಸಬಹುದು. ವಾಹನಗಳಲ್ಲಿ ಹೋಗುವಾಗ, ರಸ್ತೆಯಲ್ಲಿ ನಡೆದಾಡುವಾಗ ಧೂಳು, ಗಾಳಿಯಿಂದ ಕಣ್ಣನ್ನು ರಕ್ಷಿಸಿಕೊಳ್ಳುವುದು ಕಷ್ಟ. ಅತ್ಯಂತ ಸೂಕ್ಷ್ಮ ಕಣಗಳು ಕಣ್ಣಿಗೆ ಬಿದ್ರೆ ಅದು ನಮ್ಮ ಅರಿವಿಗೇ ಬರದೇ ನಿರಂತರ ಕಿರಿಕಿರಿಯಾಗಿ ಪದೇ ಪದೇ ಕಣ್ಣಿನಲ್ಲಿ ಚುಚ್ಚಿದ ಅನುಭವ ನೀಡಿ ಕಣ್ಣಿಗೆ ಅಪಾಯವನ್ನು ತರಬಹುದು.