Public App Logo
Jansamasya
News
पुलिस
Maharashtra
Bjp
National
Police
Bihar
India
भारत
भाजपा
मुख्यमंत्री
Congress
Modi
Delhi
Viral
शिक्षा
Up
लापरवाही
दिल्ली
Breakingnews
Narendramodi
Madhya_pradesh
Nsui
Pmmodi
Rahulgandhi
Ipl
यूपी
Pm
Haryana
No video available

ಗುಂಡ್ಲುಪೇಟೆ: ಸಾಂಪ್ರದಾಯಿಕ ಪದ್ಧತಿಯಿಂದ ಕೀಟ ನಿರ್ವಹಣೆ ಸಾಧ್ಯ; ಕಬ್ಬಹಳ್ಳಿಯಲ್ಲಿ ಕೀಟ ಶಾಸ್ತ್ರಜ್ಞ ಶಿವರಾಯ ನಾವಿ

ಧಾನ್ಯ ಶೇಖರಣೆ ಸಮಯದಲ್ಲಿ ಧಾನ್ಯಗಳನ್ನು ಅನುಪಯುಕ್ತ ಗೊಳಿಸುವ ಕೀಟಗಳ ನಿರ್ವಹಣೆ ಮಾಡುವುದು ನಮ್ಮ ಜವಾಬ್ದಾರಿಯಾಗಿದ್ದು ಸಾಂಪ್ರದಾಯಿಕ ಪದ್ಧತಿಯಿಂದ ಕೀಟ ನಷ್ಟ ತಡೆ ಸಾದ್ಯ ಎಂದು ಕೀಟ ಶಾಸ್ತ್ರಜ್ಞ ಡಾ. ಶಿವರಾಯ ನಾವಿ ತಿಳಿಸಿದರು. ಕೃಷಿ ವಿಶ್ವವಿದ್ಯಾನಿಲಯ ಮತ್ತು ಚಾಮರಾಜನಗರ ಕೃಷಿ ಮಹಾವಿದ್ಯಾಲಯದ ಸಹಯೋಗದಲ್ಲಿ ಗುಂಡ್ಲುಪೇಟೆ ತಾಲೂಕಿನ ಕಬ್ಬಹಳ್ಳಿಯಲ್ಲಿ ಗುರುವಾರ ನಡೆದ ಗ್ರಾಮೀಣ ಕೃಷಿ ಕಾರ್ಯನುಭವದಲ್ಲಿ ಅವರು ಮಾತನಾಡಿದರು. ಧಾನ್ಯಗಳನ್ನು ಮುಂದಿನ ಬಿತ್ತನೆಗಾಗಿ ಬಳಸುವುದು ವಾಡಿಕೆಯಲ್ಲಿದೆ ಹಾಗಾಗಿ ಧಾನ್ಯಗಳನ್ನು ಉತ್ತಮ ರೀತಿಯಲ್ಲಿ ಶೇಖರಿಸಿಡುವುದು ರೈತರ ಜವಾಬ್ದಾರಿಯಾಗಿದೆ.ಧಾನ್ಯಗಳನ್ನು ಸಾಂಪ್ರದಾಯಿಕ ಪದ್ಧತಿಯಲ್ಲಿ ಉಪ್ಪು ,ಬೇವಿನ ಎಲೆ ಮುಂತಾದ ವಸ್ತುಗಳನ್ನು ಬಳಸಿಕೊಂಡು ಕೀಟ ನಿರ್ವಹಣೆ ಸಾಧ್ಯ ಎಂದರು.