ಬೆಳಗಾವಿ: ಸಂಕೇಶ್ವರ ನಿಲಗಾರ ಗಣಪತಿ ದರ್ಶನ ವೇಳೆ ಭಾರಿ ನೂಕುನುಗ್ಗಲು: ತಪ್ಪಿದ ಭಾರಿ ಅನಾಹುತ!
ಬೆಳಗಾವಿ ಜಿಲ್ಲೆಯ ಸಂಕೇಶ್ವರ ನಿಲಗಾರ ಗಣಪತಿ ದೇವಸ್ಥಾನದಲ್ಲಿ ಭಾನುವಾರ ಭಕ್ತರ ನೂಕುನುಗ್ಗಲಿನಿಂದ ಕಾಲ್ತುಳಿತದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಭಾರೀ ಸಂಖ್ಯೆಯಲ್ಲಿ ಭಕ್ತರು ಬಂದಿದ್ದರಿಂದ ಸರತಿ ಸಾಲಿನಲ್ಲಿ ನೂಕಾಟ ಉಂಟಾಗಿದ್ದು, ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ.