ಶಿರಸಿ: ಗಣೇಶನಗರದಲ್ಲಿ ಹಂದಿ ಸಾಕಾಣಿಕೆ ವಿರೋಧಿಸಿ ಪ್ರತಿಭಟನೆ ನಗರಸಭೆ ನೋಟಿಸ್ ನಿರ್ಲಕ್ಷ್ಯ ಆರೋಪ
ಶಿರಸಿ ನಗರದ ಗಣೇಶ ನಗರದಲ್ಲಿ ವಾಸವಾಗಿರುವ ಮೋಹನ್ ಮರಾಠಿ ಎಂಬುವವರ ಹಂದಿ ಸಾಕಾಣಿಕೆಯಿಂದ ಸುತ್ತಮುತ್ತಲಿನ ನಿವಾಸಿಗಳಿಗೆ ಅನಾರೋಗ್ಯ ಮತ್ತು ದುರ್ವಾಸನೆ ಕಾಡುತ್ತಿದೆ ಎಂದು ಆರೋಪಿಸಿ, ಜನರು ಅವರ ಮನೆಯ ಮುಂದೆ ಪ್ರತಿಭಟನೆ ಗುರುವಾರ ಮಧ್ಯಾಹ್ನ 2.45ರವರೆಗೆ ನಡೆಸಿದರು. ಈ ಬಗ್ಗೆ ಎರಡು ವರ್ಷದ ಹಿಂದೆ ನಗರಸಭೆ ಹಂದಿಗಳನ್ನು ಸ್ಥಳಾಂತರಿಸುವಂತೆ ನೋಟಿಸ್ ನೀಡಿತ್ತು. ಆದರೆ, ಮೋಹನ್ ಆ ನೋಟಿಸನ್ನು ನಿರ್ಲಕ್ಷಿಸಿ ಅದೇ ಸ್ಥಳದಲ್ಲಿ ವೃತ್ತಿ ಮುಂದುವರಿಸಿದ್ದಾರೆ. ಈ ಬಗ್ಗೆ ಕ್ರಮಕೈಗೊಳ್ಳುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.