ನೆಲಮಂಗಲ: ತಮ್ಮೇನಹಳ್ಳಿಯಲ್ಲಿ ಸ್ನೇಹಿತೆ ರೂಂನಲ್ಲಿ ಯುವತಿಯ ಕೊಲೆ ಮಾಡಿದ್ದ ಆರೋಪಿಯ ಬಂಧಿಸಿದ ಮಾದನಾಯಕನಹಳ್ಳಿ ಪೊಲೀಸರು
ನೆಲಮಂಗಲ ಮಾದನಾಯಕನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಯುವತಿ ದೇವಿಶ್ರೀ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಈಗಾಗಲೇ ಯಶಸ್ವಿಯಾಗಿದ್ದಾರೆ. ಪ್ರೇಮವರ್ಧನ್‍ನ್ನು ಬಂಧಿತ ಆರೋಪಿ. ಪ್ರತಿಷ್ಠಿತ ಕಾಲೇಜಿನಲ್ಲಿ ಬಿಬಿಎಂ ವ್ಯಾಸಾಂಗ ಮಾಡುತ್ತಿದ್ದ ಆಂಧ್ರ ಮೂಲದ ದೇವಿಶ್ರೀ ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿನಲ್ಲಿ ವಾಸವಾಗಿದ್ದಳು. ಆರೋಪಿ ಪ್ರೇಮವರ್ಧನ್, ಯುವತಿಯನ್ನು ತನ್ನ ಸ್ನೇಹಿತೆಯ ರೂಂಗೆ ಕರೆದುಕೊಂಡು ಹೋಗಿ, ದೇವಿಶ್ರೀಯ ಇತರೆ ಸ್ನೇಹಗಳಿಂದ ಹುಟ್ಟಿದ ಅಸೂಯೆಯಿಂದ ಕೊಲೆ ಮಾಡಿದ್ದಾನೆಂದು ತನಿಖೆಯಲ್ಲಿ ಬಹಿರಂಗವಾಗಿದೆ.