ಸೋಮವಾರಪೇಟೆ: ನಂದಿಗುಂದದಲ್ಲಿ ಕಳಪೆ ರಸ್ತೆ ಕಾಮಗಾರಿ: ಗ್ರಾಮಸ್ಥರಿಂದ ತಡೆ, ಲೋಕಾಯುಕ್ತಕ್ಕೆ ದೂರು
ಕೊಡಗು ಜಿಲ್ಲೆಯ ನಂದಿಗುಂದ ಗ್ರಾಮದಲ್ಲಿ ಕೆಆರ್ಐಡಿಎಲ್ (KRIDL) ವತಿಯಿಂದ ನಡೆಯುತ್ತಿದ್ದ ಕಳಪೆ ಗುಣಮಟ್ಟದ ರಸ್ತೆ ಕಾಮಗಾರಿಯನ್ನು ಗ್ರಾಮಸ್ಥರು ಹಾಗೂ ಕರವೇ ಸ್ವಾಭಿಮಾನಿ ಸೇನೆ ತಡೆಹಿಡಿದಿದೆ. ನಿಯಮಬಾಹಿರವಾಗಿ ರಾತ್ರಿ ವೇಳೆ ನಡೆಯುತ್ತಿದ್ದ ಈ ಕೆಲಸದ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಲು ನಿರ್ಧರಿಸಲಾಗಿದೆ.