ಹರಪನಹಳ್ಳಿ: ಮೆಕ್ಕಾ ಯಾತ್ರೆಯ ವೇಳೆ ವಿಜಯನಗರದ ಸರ್ಕಾರಿ ಶಾಲಾ ಶಿಕ್ಷಕಿ ಸಾವು
ವಿಜಯನಗರ ಜಿಲ್ಲೆಯ ಹರಪನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ನಗೀನಾಬಾನು (52) ಮೆಕ್ಕಾ ಮದೀನಾ ಯಾತ್ರೆಯ ವೇಳೆ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಪತಿ ಹಾಗೂ ಸಂಬಂಧಿಕರೊಂದಿಗೆ ಯಾತ್ರೆಗೆ ತೆರಳಿದ್ದಾಗ ಈ ದುರ್ಘಟನೆ ಸಂಭವಿಸಿದೆ.