ಸೂಪಾ: ಸುಳಗೇರಿ ಗ್ರಾಮಕ್ಕೆ ಕೆ.ಪಿ.ಸಿ ಕದ್ರಾ ಮತ್ತು ಉಳವಿ ಗ್ರಾಮ ಪಂಚಾಯತ್ ವತಿಯಿಂದ ತಾತ್ಕಾಲಿಕ ಕಾಲು ಸಂಕ ನಿರ್ಮಾಣ
ಜೋಯಿಡಾ :ಕದ್ರಾ - ಕೊಡಸಳ್ಳಿ ಸುಳಗೇರಿ ರಸ್ತೆಯಲ್ಲಿ ಭೂ ಕುಸಿತವಾಗಿದ್ದ ಹಿನ್ನಲೆಯಲ್ಲಿ ಕದ್ರಾಕ್ಕೆ ಹೋಗಲು ಸುಳಗೇರಿ ಗ್ರಾಮದ ಜನರಿಗೆ ರಸ್ತೆ ಸಂಪರ್ಕ ಕಡಿತವಾಗಿದ್ದು, ಇದನ್ನು ಅರಿತ ಕೆ.ಪಿ.ಸಿ ಕದ್ರಾ ಎಇಇ ನಿತೇಶ್ ಹಾಗೂ ಉಳವಿ ಗ್ರಾಮ ಪಂಚಾಯತ್ ಅಧ್ಯಕ್ಷ ಮಂಜುನಾಥ ಮೋಕಾಶಿ ಅವರ ಮಾರ್ಗದರ್ಶನದಲ್ಲಿ ಸುಳಗೇರಿ ಗ್ರಾಮದ ಜನರಿಗೆ ನದಿಯ ದಂಡೆಯ ಪಕ್ಕದಿಂದ ಕಟ್ಟಗೆಯ ಕಾಲು ಸಂಕವನ್ನು ತಾತ್ಕಾಲಿಕವಾಗಿ ನಿರ್ಮಾಣ ಮಾಡಿಕೊಡಲಾಗಿದೆ. ಈ ಬಗ್ಗೆ ಭಾನುವಾರ ಸಂಜೆ 5:00 ಗಂಟೆ ಸುಮಾರಿಗೆ ಮಾಧ್ಯಮಕ್ಕೆ ಮಾಹಿತಿ ಲಭ್ಯವಾಗಿದೆ. ಭೂ ಕುಸಿತದಿಂದಾಗಿ ರಸ್ತೆ ಸಂಪೂರ್ಣ ಬಂದ ಆಗಿದ್ದು ಸೂಳಗೇರಿ ಭಾಗದ ಜನರಿಗೆ ರಸ್ತೆ ಇಲ್ಲದ ಕಾರಣ ಜನರಿಗೆ ತಾತ್ಕಾಲಿಕವಾಗಿ ತಿರುಗಾಡಲು ತಾತ್ಕಾಲಿಕ ಕಾಲು ಸಂಕ ನಿರ್ಮಾಣ ಮಾಡಲಾಗಿದೆ.